ಕರ್ನಾಟಕ

ಮತ್ತೆ ನಾನಾಗಿ ಧರಣಿ ಸ್ಥಳಕ್ಕೆ ಹೋಗಲ್ಲ; ಅವರೇ ಇಲ್ಲಿಗೆ ಬರಲಿ: ಅಂಬರೀಶ್

Pinterest LinkedIn Tumblr

Ambareesh

ಬೆಂಗಳೂರು: ಉತ್ತಮ ರೀತಿಯಲ್ಲಿ ಚರ್ಚಿಸಿದರೆ ಸಮಸ್ಯೆ ಬಗೆಹರಿಯುತ್ತೆ ಅದನ್ನು ಬಿಟ್ಟು ದಬ್ಬಾಳಿಕೆ ನಡೆಸಿದರೆ ಏನೂ ಬಗೆಹರಿಯಲ್ಲ ಎಂದು ಸಚಿವ, ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್ ಹೇಳಿದ್ದಾರೆ.

ಖಾಸಗಿ ವಾಹಿನಿಗಳು ಕನ್ನಡ ಚಿತ್ರಗಳ ಸ್ಯಾಟೆಲೈಟ್ ಹಕ್ಕುಗಳನ್ನು ಖರೀದಿಸುತ್ತಿಲ್ಲ ಹಾಗೂ ಸ್ಟಾರ್ ನಟರು ನಿರ್ಮಾಪಕರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಚಾನೆಲ್ ಗಳ ರಿಯಾಲಿಟಿ ಶೋನಲ್ಲಿ ನಟರು  ಭಾಗವಹಿಸುತ್ತಿದ್ದು, ಇದರಿಂದ ಸಿನಿಮಾ ಕಲೆಕ್ಷನ್ ಡಲ್ ಆಗುತ್ತಿದೆ ಎಂಬ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕನ್ನಡ ಚಲನಚಿತ್ರ ನಿರ್ಮಾಪಕರು ಇಂದಿನಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಈ ನಡುವೆ ಅಂಬರೀಶ್ ನಾನು ಇನ್ನು ಧರಣಿ ಸ್ಥಳಕ್ಕೆ ಹೋಗಲ್ಲ; ಅವರೇ ಇಲ್ಲಿಗೆ ಬರಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಾನೇ ಧರಣಿ ನಡೆಸುತ್ತಿದ್ದವರ ಬಳಿಗೆ ಹೋದಾಗ ಸರಿಯಾಗಿ ನಡೆದುಕೊಳ್ಳಲಿಲ್ಲ. ಕಳೆದ 45 ವರ್ಷದಿಂದ ಚಿತ್ರರಂಗದಲ್ಲಿ ಇದ್ದೇನೆ. ನಾನು ಖಳನಟನಾಗಿ ಚಿತ್ರರಂಗಕ್ಕೆ ಬಂದು ಕೇಂದ್ರ ಮಂತ್ರಿಯೂ ಆಗಿದ್ದೇನೆ. ಇದೆಲ್ಲವೂ ಜನರ ವಿಶ್ವಾಸದಿಂದ ದೊರಕಿದೆ ಎಂದು ಹೇಳಿದರು.

ಇತ್ತೀಚೆಗಷ್ಟೇ ಧರಣಿ ನಡೆಸುತ್ತಿದ್ದ ನಿರ್ಮಾಪಕ ಬಳಿ ಮಾತುಕತೆಗೆ ಸಚಿವ ಅಂಬರೀಶ್ ಬಂದ ಸಂದರ್ಭದಲ್ಲಿ ಧಿಕ್ಕಾರ ಕೂಗಿ ಅವಮಾನ ಮಾಡಿದ್ದರು. ತದನಂತರ ಅಂಬರೀಶ್ ಗೆ ಅವಮಾನ ಮಾಡಿದ್ದರಿಂದ, ಅವಮಾನಿಸಿದ ನಿರ್ಮಾಪಕರನ್ನು ವಜಾ ಮಾಡುವವರೆಗೆ ಮಾತುಕತೆ ಪ್ರಶ್ನೆಯೇ ಇಲ್ಲ ಎಂದು ಕನ್ನಡ ಕಲಾವಿದರ ಸಂಘದ ಕಾರ್ಯದರ್ಶಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಖಜಾಂಚಿ ದೊಡ್ಡಣ್ಣ ಎಚ್ಚರಿಕೆ ನೀಡಿದ್ದರು.

Write A Comment