ಕರ್ನಾಟಕ

ಅಬ್ಬಾ ಈ ಪೊಲೀಸಪ್ಪ 51 ಮನೆಗಳ ಒಡೆಯ; 8 ಭ್ರಷ್ಟರ ವಿರುದ್ಧ ಲೋಕಾ ದಾಳಿ

Pinterest LinkedIn Tumblr

Lokayukta_Kranataka-FIಬೆಂಗಳೂರು: ಬೆಂಗಳೂರು, ಮಂಗಳೂರು, ಮೈಸೂರು, ಬಾಗಲಕೋಟೆ, ಬೆಳಗಾವಿ ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಲ್ಲಿ ಲೋಕಾಯುಕ್ತ ಪೊಲೀಸರು ಗುರುವಾರ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ವಿರುದ್ಧ ದಾಳಿ ನಡೆಸಿದ್ದಾರೆ. ಈ ಬಾರಿಯ ದಾಳಿಯಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡಿರುವುದು ಎಎಸ್ಐಯೊಬ್ಬರ ಕೋಟಿ, ಕೋಟಿ ಮೊತ್ತದ ಆಸ್ತಿ.

ಲೋಕಾಯುಕ್ತ ಎಸ್ಪಿ ನಾರಾಯಣ್ ನೇತೃತ್ವದಲ್ಲಿ 8 ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿಯ ಪೂರ್ಣ ವಿವರ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

ಬೆಂಗಳೂರು, ಮಂಗಳೂರು, ಮೈಸೂರು, ಬಾಗಲಕೋಟೆ, ಬೆಳಗಾವಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಮುಖ್ಯ ಪಿಡಬ್ಲ್ಯಡಿ ಇಂಜಿನಿಯರ್, ಮಂಡ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಅಣ್ಣೇಗೌಡ, ಗ್ರಾಮಲೆಕ್ಕಿಗ ಸಿದ್ದಾರ್ಥ್ ಸಿಂಗಾಡಿ, ಆರ್ ಎಫ್ ಓ ಬಾಲಕೃಷ್ಣ ಅವರ ಪೂತ್ತೂರು ನಿವಾಸ  ಸೇರಿದಂತೆ 8 ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ, ದಾಖಲೆ ಪರಿಶೀಲಿಸುತ್ತಿದ್ದಾರೆ.

ಅಬ್ಬಾ…ಈ ಎಎಸ್ಐ 51 ಮನೆಗಳ ಒಡೆಯ!
ಹೌದು ಬಿಡದಿ ಠಾಣೆಯ ಎಎಸ್ಐ ಜಗದೀಶ್ ಎಂಬವರು  ತಲಘಟ್ಟಪುರ ಸಮೀಪದ ರಘುವನಹಳ್ಳಿಯಲ್ಲಿ 51 ಮನೆಗಳ ಬೃಹತ್ ಅಪಾರ್ಟ್ ಮೆಂಟ್ ಹೊಂದಿರುವುದು ಲೋಕಾಯುಕ್ತ ದಾಳಿಯಲ್ಲಿ ಬಯಲಾಗಿದೆ. ಎಸ್ಆರ್ಎಸ್ ಕೃಪಾ ನಿಯಲ ಹೆಸರಿನ ಈ ಅಪಾರ್ಟ್ ಮೆಂಟ್ ಎಎಸ್ಐ ಜಗದೀಶ್ ಹೆಸರಿನಲ್ಲಿದೆ. ಅಷ್ಟೇ ಅಲ್ಲ ನಾಲ್ಕು ಐಶಾರಾಮಿ ಕಾರು, 2 ಬೈಕ್ ಸೇರಿ ಕೋಟ್ಯಂತರ ರೂಪಾಯಿ ಆಸ್ತಿ ಪತ್ತೆಯಾಗಿದೆ.
-ಉದಯವಾಣಿ

Write A Comment