ಕರ್ನಾಟಕ

ಕೆರೆಗಳ ಸರ್ವೆ ಕಾರ್ಯ ಆರಂಭ: ಅತಿಕ್ರಮಣಕ್ಕೆ ಅಂತ್ಯ ಹಾಡಲು ಕಂದಾಯ ಇಲಾಖೆ ನಿರ್ಧಾರ

Pinterest LinkedIn Tumblr

Untitled-4

ಬೆಂಗಳೂರು: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಕೆರೆಗಳ ಅತಿಕ್ರಮಣಕ್ಕೆ ಅಂತ್ಯ ಹಾಡಲು ನಿರ್ಧ ರಿಸಿರುವ ಕಂದಾಯ ಇಲಾಖೆಯು, ಇದೀಗ ಎರಡು ಜಿಲ್ಲೆಗಳಲ್ಲಿರುವ ಸುಮಾರು 1,600 ಕೆರೆಗಳ ಸರ್ವೆ ಕಾರ್ಯ ಕೈಗೆತ್ತಿಕೊಂಡಿದೆ.

ಕೆರೆ ಒತ್ತುವರಿ ತೆರವು ಕುರಿತ ಶಾಸಕ ಕೆ.ಬಿ. ಕೋಳಿವಾಡ ನೇತೃತ್ವದ ಸದನ ಸಮಿತಿಯ ನಿರ್ದೇಶನದ ಮೇರೆಗೆ ಸರ್ವೆ ಕಾರ್ಯವು ಮೇ 29ರಿಂದ ಆರಂಭಗೊಂಡಿದೆ. ಇದಕ್ಕಾಗಿ 300 ಭೂಮಾಪಕರನ್ನು ಬಳಸಿ ಕೊಳ್ಳಲು ನಿರ್ಧರಿಸಿದೆ.

ಈ ಕಾರ್ಯದಲ್ಲಿ ತೊಡಗಿರುವ ಕಂದಾಯ ಇಲಾಖೆಯ ಭೂಮಾಪನ ಮತ್ತು ಭೂ ದಾಖಲೆಗಳ ಘಟಕವು (ಎಸ್‌ಎಸ್‌ಎಲ್‌ಆರ್) ಎಲ್ಲ ಕೆರೆಗಳ ಭೂಮಾಪನ ಕಾರ್ಯವನ್ನು ಆಗಸ್ಟ್‌ 31ರೊಳಗೆ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದೆ.

ಸಮರೋಪಾದಿಯಲ್ಲಿ ಕೆಲಸ: ‘ಕೆರೆಗಳ ಭೂಮಾಪನ ಮತ್ತು ನಕ್ಷೆ ರಚನೆ ಕಾರ್ಯ ಸಮರೋಪಾದಿಯಲ್ಲಿ ನಡೆಯಲಿದೆ. 1965ರ ಭೂಮಾಪನ ದಾಖಲೆ ಪ್ರಕಾರ ಕೆರೆಗಳ ಗಡಿಗಳನ್ನು ಗುರುತಿಸಲಾಗುತ್ತದೆ. ಇದರಿಂದ ಎಷ್ಟು ಪ್ರಮಾಣದಲ್ಲಿ ಕೆರೆ ಒತ್ತುವರಿಯಾಗಿದೆ ಎಂದು ಪತ್ತೆ ಮಾಡಬಹುದು’ ಎಂದು ಎಸ್‌ಎಸ್‌ಎಲ್‌ಆರ್ ಆಯುಕ್ತ ಮುನಿಷ್ ಮೌದ್ಗಿಲ್ ತಿಳಿಸಿದರು.

‘ಮೊದಲ ಹಂತದಲ್ಲಿ 88 ಭೂಮಾಪಕರನ್ನು ಎರಡು ಜಿಲ್ಲೆಗಳ 40 ಕೆರೆಗಳ ಸರ್ವೆ ಕಾರ್ಯಕ್ಕೆ ನಿಯೋಜಿಸ ಲಾಗಿದೆ. ಈ ಕಾರ್ಯವು ವಾರದೊಳಗೆ ಮುಗಿಯುವ ನಿರೀಕ್ಷೆ ಇದೆ’ ಎಂದು ಹೇಳಿದರು.

‘ಸರ್ವೆ ಕಾರ್ಯವು ಬಿಬಿ ಎಂಪಿ, ಬೆಂಗಳೂರು ಅಭಿವೃದ್ಧಿ ಪ್ರಾಧಿ ಕಾರ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಸಣ್ಣ ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆ… ಹೀಗೆ ಕೆರೆ ಯಾವ ಇಲಾಖೆಯ ವ್ಯಾಪ್ತಿಗೆ ಬರುತ್ತದೆಯೋ ಆ ಇಲಾಖೆಗಳ ಅಧಿಕಾ ರಿಗಳ ಸಮಕ್ಷಮದಲ್ಲಿ ನಡೆಯಲಿದೆ’ ಎಂದರು.
*
ಡಿಜಿಟಲ್ ನಕ್ಷೆಯ ಸಹಾಯ
1965ರಲ್ಲಿ ನಡೆದ ಭೂಮಾಪನದಲ್ಲಿ ರಚಿಸಲಾದ ನಕ್ಷೆಗಳನ್ನು ಉಪಗ್ರಹ ಚಿತ್ರಗಳ ಮೂಲಕ ಈಗಾಗಲೇ ಡಿಜಿಟಲೀಕರಣ ಮಾಡಲಾಗಿದೆ. ಈ ಸರ್ವೆ ಕಾರ್ಯದಲ್ಲಿ ಆ ಡಿಜಿಟಲ್‌ ನಕ್ಷೆಗಳ ಸಹಾಯ ಪಡೆಯಲು ಎಸ್‌ಎಸ್‌ಎಲ್‌ಆರ್ ಚಿಂತಿಸಿದೆ.

ಡಿಜಿಟಲ್‌ ನಕ್ಷೆಗಳನ್ನು ಬಳಸಿ ಜಿಲ್ಲಾಡಳಿತ ಇತ್ತೀಚೆಗೆ ಬಾಣಸವಾಡಿ ಕೆರೆ ಮತ್ತು ಚೇಳಿಕೆರೆ ಒತ್ತುವರಿಯನ್ನು ಪತ್ತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Write A Comment