ಕರ್ನಾಟಕ

ಚಿಕ್ಕಬಳ್ಳಾಪುರದ ಮಲ್ಲಪ್ಪ ಕ್ಲೀನ್‌ಸ್ವೀಪ್; ಚಲಾವಣೆಯಾದ ಎಲ್ಲ ಮತಗಳನ್ನೂ ಪಡೆಯುವ ಮೂಲಕ ದಾಖಲೆ

Pinterest LinkedIn Tumblr

vict

ಚಿಕ್ಕಬಳ್ಳಾಪುರ, ಜೂ.6: ತಾಲೂಕಿನ ನಂದಿ ಗ್ರಾಮ ಪಂಚಾಯತ್‌ನ ಸಿಂಗಾಟಕ ದಿರೇನಹಳ್ಳಿಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿ.ಕೆ.ಮಲ್ಲಪ್ಪ ಚಲಾವಣೆಯಾದ ಎಲ್ಲ ಮತಗಳನ್ನೂ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ.

ಸಿಂಗಾಟಕದಿರೇನಹಳ್ಳಿ ಗ್ರಾಮದ ಒಟ್ಟು 424 ಮತದಾರರ ಪೈಕಿ ಒಟ್ಟು 409 ಮತಗಳು ಚಲಾವಣೆಯಾಗಿದ್ದವು. ಇದರಿಂದಾಗಿ ಪ್ರತಿಸ್ಪರ್ಧಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೀತಾ ಅವರಿಗೆ ಒಂದು ಮತವೂ ಇಲ್ಲದಂತಾಗಿದೆ. ಸತತ ಮೂರನೆ ಬಾರಿ ಜಯಗಳಿಸಿರುವ ಸಿ.ಕೆ.ಮಲ್ಲಪ್ಪ ಅವರನ್ನು ಈ ಬಾರಿಯೂ ಅವಿರೋಧ ಆಯ್ಕೆ ಮಾಡಲು ಜನತೆ ತೀರ್ಮಾನಿಸಿದ್ದರು. ಆದರೆ ಪಕ್ಕದ ನಂದಿ ಗ್ರಾಮದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೀತಾ ಕೊನೆ ಕ್ಷಣದಲ್ಲಿ ನಾಮಪತ್ರ ಸಲ್ಲಿಸಿದ್ದರು. ಗೀತಾ ನಂದಿ ಗ್ರಾಮದ ನಿವಾಸಿಯಾಗಿರುವುದರಿಂದ ಸಿಂಗಾಟಕದಿರೇನಹಳ್ಳಿ ಗ್ರಾಮದಲ್ಲಿ ಅವರು ಮಾತದಾನ ಮಾಡಿರಲಿಲ್ಲ.

Write A Comment