ಕರ್ನಾಟಕ

ಮೈಸೂರಿನ ಹಾಡ್ಯದಲ್ಲಿ 18ನೇ ಶತಮಾನದ ಶಾಸನ ಪತ್ತೆ

Pinterest LinkedIn Tumblr

inscription

ಮೈಸೂರು: ಮೈಸೂರು ಒಡೆಯರ್ ಕಾಲದ ಶಾಸನವೊಂದು ಕೆ.ಆರ್.ನಗರ ತಾಲೂಕು ಹಾಡ್ಯ ಗ್ರಾಮದಲ್ಲಿ ಪತ್ತೆಯಾಗಿದೆ. ಮಾನಸ ಗಂಗೋತ್ರಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಅಧ್ಯಯನ ವಿಭಾಗದ ಸಂಶೋಧಕ ಸನತ್‍ಕುಮಾರ್ ಅವರು ಹಾಡ್ಯ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಅರ್ಚಕ ಎಚ್.ವಿ. ಜಗದೀಶ್ ಅವರ ಮನೆಯಲ್ಲಿ ಈ ಶಾಸನ ಪತ್ತೆ ಮಾಡಿದ್ದಾರೆ. ಅಲ್ಲಿ ದೊರೆತ ಕಂಚಿನ ಮೂರ್ತಿಯ ಪೀಠದಲ್ಲಿ ಕ್ರಿ.ಶ. 18ನೇ ಶತಮಾನದ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲಕ್ಕೆ ಸೇರಿದ ಶಾಸನ ಕಂಡುಬಂದಿದೆ.

ಶಾಸನವು ವೀರಭದ್ರ ಶಿಲ್ಪದ ಕೆಳಭಾಗದ ಹಿಂಭಾಗದಲ್ಲಿ ಕೆತ್ತನೆಯಾಗಿದೆ. ಈ ಶಾಸನದಲ್ಲಿ ಸೊಸ್ತಿಶ್ರೀ  ಜಯಾಬ್ಯುದಯ ಶಾಲಿವಾಹನ ಶಕ 1751ನೇ ವಿರೋ ಸಂವತ್ಸರದ ಕಾರ್ತಿಕ ಶು 10 ಲು ಪಾಡ್ಯದ ಶ್ರೀ ವೀರಭದ್ರ ದೇವರ ಉತ್ಸವಮೂರ್ತಿ ಗೋವಿಂದನಹಳಿ ಪುಟಾಚಾರಿ ಮಾಡಿದ ವಿಗ್ರಹಾ (ಹಾ) ಚಗೌಉಡರ ಬುಕ್ತಿ! ಎಂದು ಬರೆದಿದೆ. ಸನತ್ ಕುಮಾರ್ ಅವರು ಮೈಸೂರು ವಿವಿ ಪುರಾತತ್ತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಜಿ. ಕರಿಯಪ್ಪ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಹಾಡ್ಯ ಗ್ರಾಮದಲ್ಲಿ ಕ್ಷೇತ್ರಕಾರ್ಯಕ್ಕೆ ಭೇಟಿ ನೀಡಿದ್ದಾಗ ಈ ಶಾಸನ ಪತ್ತೆಯಾಗಿದೆ.

Write A Comment