ಕರ್ನಾಟಕ

100ಕ್ಕೂ ಹೆಚ್ಚು ನಾಣ್ಯಗಳನ್ನು ನುಂಗಿದ ವ್ಯಕ್ತಿ ; ಆಪರೇಶನ್‌ ಮೂಲಕ ಹೊರತೆಗೆದ ಬಳ್ಳಾರಿ ವಿಮ್ಸ್ ಆಸ್ಪತ್ರೆಯ ವೈದ್ಯರು

Pinterest LinkedIn Tumblr

coin

ಬಳ್ಳಾರಿ: ಮಕ್ಕಳು ಕಣ್ಣು ತಪ್ಪಿಸಿ ನಾಣ್ಯ ನುಂಗಿ ರಾದ್ಧಾಂತ ಸೃಷ್ಟಿಸಿರೋದನ್ನ ನೀವೆಲ್ಲಾ ಕೇಳಿದ್ದೀರಿ, ನೋಡಿದ್ದೀರಿ. ಆದರೆ ಇಲ್ಲೊಬ್ಬ ಭೂಪ ಕಳೆದ ಒಂದು ವರ್ಷದಿಂದ ನಾಣ್ಯ ನುಂಗುತ್ತಾ ಬಂದಿದ್ದಾನೆ. ಕೇಳಲು ನಿಮಗೆ ಅಚ್ಚರಿ ಅನಿಸಿದರೂ ಇದುವೇ ನಿಜ.

ಮಾನಸಿಕ ಅಸ್ವಸ್ಥನಾಗಿರುವ ಈತನ ಹೆಸರು ಈಶ್ವರ ರೆಡ್ಡಿ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ನಿವಾಸಿ. ಒಂದು, ಎರಡು ಮತ್ತು ಐದು ರೂಪಾಯಿಯ ಮುಖ ಬೆಲೆಯ ಸುಮಾರು ನೂರಕ್ಕೂ ಹೆಚ್ಚು ನಾಣ್ಯಗಳನ್ನು ನುಂಗಿ ಅಚ್ಚರಿ ಮೂಡಿಸಿದ್ದಾನೆ. ನಾಣ್ಯ ನುಂಗಿ ಅಸ್ವಸ್ಥನಾದ ಈತನನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಯ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಈತನ ಜೀವ ಉಳಿಸಿದ್ದಾರೆ.

coin1

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರೆಡ್ಡಿ, ತನ್ನ ಹೊಟ್ಟೆಯನ್ನು ಕಾಣಿಕೆ ಡಬ್ಬಿ ಅಂದುಕೊಂಡಿದ್ದನೋ ಗೊತ್ತಿಲ್ಲ. ಆದರೆ ನಾಣ್ಯವನ್ನು ನುಂಗುತ್ತಾ ಬಂದದ್ದಂತೂ ನಿಜ. ಅದು ನಿನ್ನೆ ಮೊನ್ನೆಯಿಂದಲ್ಲ. ಕಳೆದೊಂದು ವರ್ಷದಿಂದ. ಇದನ್ನು ಯಾರು ಗಮನಿಸಿಯೇ ಇಲ್ಲ ಎನ್ನುವುದು ಕೂಡ ಆಶ್ಚರ್ಯವೇ.

coin33

ಕಳೆದ 10-15 ದಿನಗಳಿಂದ ಈಶ್ವರ್‌ಗೆ ಮೂತ್ರವೇ ಬಾರದೇ ತೀವ್ರ ಅಸ್ವಸ್ಥನಾಗಿದ್ದ ವೇಳೆ ತಪಾಸಣೆಗೆಂದು ರೆಡ್ಡಿಯನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಏಕ್ಸ್‌ರೇ ತೆಗೆಯಲಾಯಿತು. ಆವಾಗ ನೋಡಿ ಹೊಟ್ಟೆಯಲ್ಲಿ ಸಂಗ್ರಹವಾಗಿದ್ದ ನಾಣ್ಯಗಳನ್ನ ಕಂಡು ವೈದ್ಯರೇ ಅವಾಕ್ಕಾಗಿದ್ದರು.

ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು, ಇದೀಗ ಈಶ್ವರ ರೆಡ್ಡಿಯ ಪ್ರಾಣ ಉಳಿಸಿದ್ದಾರೆ. ಇನ್ನಾದರೂ ನಾಣ್ಯ ನುಂಗೋದನ್ನ ನಿಲ್ಲಿಸ್ತಾನಾ ಅಥವಾ ಮುಂದುವರೆಸುತ್ತಾನಾ ಕಾದು ನೋಡಬೇಕು.

Write A Comment