ಕನ್ನಡ ವಾರ್ತೆಗಳು

ಅಂತರಾಷ್ಟ್ರೀಯ ಕಾಣೆಯಾದ ಮಕ್ಕಳ ದಿನಾಚರಣೆ ಕಾರ್ಯಕ್ರಮ

Pinterest LinkedIn Tumblr

Child_line_prgma_1

ಮಂಗಳೂರು,ಮೇ.27:  ಅಂತರಾಷ್ಟ್ರೀಯ ಕಾಣೆಯಾದ ಮಕ್ಕಳ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮವನ್ನು ಜಪ್ಪಿನಮೊಗರು ಲಯನ್ಸ್ ಕ್ಲಬ್ ಸಬಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ ಇದರ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ನಗರ ಇವರಿಂದ ನಡೆಯುತ್ತಿರ ಮಕ್ಕಳ ಬೇಸಿಗೆ ಶಿಬಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದ.ಕ ಜಿಲ್ಲೆ ಮಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ನಗರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಪ್ಪಿನಮೊಗರು ಯುವಕ ಮಂಡಲ, ಕಾಣೆಯಾದ ಮಕ್ಕಳ ಬ್ಯುರೋ ಮತ್ತು ಮಕ್ಕಳ ಸಹಾಯವಾಣಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಕಾಣೆಯಾದ ಮಕ್ಕಳ ದಿನಾಚರಣೆ ಆಚರಿಸಲಾಯಿತು

Child_line_prgma_2 Child_line_prgma_3 Child_line_prgma_4 Child_line_prgma_5

ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ.ಗಣೇಶ್ ಬಿ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದ.ಕ ಜಿಲ್ಲೆ ಮಂಗಳೂರು, ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡುತ್ತ ಮಕ್ಕಳು ಇವತ್ತಿನ ದಿನಗಳ್ಲಿ ಕಾಣೆಯಾಗಲು ಸಮಾಜವು ತುಂಬಾ ಪರಿಣಾಮವನ್ನು ಬಿರುತ್ತಿದೆ. ಮಕ್ಕಳು ಇವತ್ತು ಕಾಣೆಯಾಗಲು ಪರೋಕ್ಷವಾಗಿ ಹೆತ್ತವರು ಕಾರಣವಾಗುತ್ತಿದ್ದಾರೆ. ಹೆತ್ತವರು ಮಕ್ಕಳ ಮೇಲೆ ಅತೀಯಾದ ಒತ್ತಡಗಳನ್ನು ಹಾಕುತ್ತಿರುವುದರಿಂದ ಮಕ್ಕಳು ಮನೆ ಬಿಟ್ಟು ಒಡಿ ಹೋಗುವ ಸನ್ನಿವೇಶಗಳು ನಿರ್ಮಾಣವಾಗುತ್ತಿದೆ. ಸಮೂಹ ಮಾಧ್ಯಮಗಳು ಮಕ್ಕಳು ಮೇಲೆ ರುಣಾತ್ಮಕ ಬೀರಿ ಕಾಣೆಯಾಗುವಲ್ಲಿ ಗರುತರ ಪಾತ್ರವನ್ನು ವಹಿಸುತ್ತುವೆ. ಆದರೆ ಸಮಾಜದ ಪ್ರತಿಯೊಬ್ಬ ನಾಗರಿಕರು, ಹೆತ್ತವರು ಮಕ್ಕಳು ಯಾವೂದೇ ಸಮಸ್ಯೆಗೆ, ಸಮಾಜದ ಘಾತುಕ ಶಕ್ತಿಗಳಿಗೆ ಬಲಿಯಾಗದಂತೆ ರಕ್ಷಿಸಿ ಮಕ್ಕಳಿಗೆ ಮಾನವೀಯ ದೃಷ್ಟಿಯಿಂದ ರಕ್ಷಣೆಯನ್ನು ನಿಡುವುದು ಭಾರತೀಯರಾದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಉಸ್ಮಾನ್. ಎ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದ.ಕ, ಇವರು ಮಾತನಾಡುತ್ತ ನಮ್ಮ ದೇಶದಲ್ಲಿ, ನಮ್ಮ ರಾಜ್ಯದಲ್ಲಿ ಹಾಗೂ ನಮ್ಮ ಊರಿನಿಂದ ಕಾಣೆಯಾಗುತ್ತಿರುವ ಮಕ್ಕಳು ಎಲ್ಲಿ ಹೋಗುತ್ತಿದ್ದಾರೆ, ಎನಾಗುತ್ತಿದ್ದಾರೆ ಅವರ ಮುಂದಿನ ಜೀವನ ಎನಾಗುತ್ತಿದೆ ಎಂದು ಚಿಂತಿಸುವುದು ಅತೀ ಅಗತ್ಯವಾಗಿದೆ. ಕಾಣೆಯಾದ ಮಕ್ಕಳಲ್ಲಿ ಕೇವಲ ಕೆಲವು ಮಕ್ಕಳು ಪತ್ತೆಯಾಗುತ್ತಿದ್ದಾರೆ ಆದರೆ ಉಳಿದ ಮಕ್ಕಳು ಎಲ್ಲಿ ಹೊಗುತ್ತಿದ್ದಾರೆ ಎಂಬುದಕ್ಕೆ ಯಾರಲ್ಲೂ ಉತ್ತರ ಇಲ್ಲವಾಗಿದೆ. ಹಾಗಾಗಿ ಪ್ರತಿಯೊಂದು ಹೆತ್ತವರು ತಮ್ಮ ಮಕ್ಕಳನ್ನು ಪ್ರೀತಿಯಿಂದ ನೊಡಿಕೊಳ್ಳಬೇಕು, ಮಕ್ಕಳನ್ನು ತಮ್ಮ ಸ್ನೇಹಿತರಂತೆ ನೊಡಬೇಕು ಹಾಗೂ ಮಗು ಸ್ನೇಹಿ ರಾಷ್ಟ್ರ ನೀರ್ಮಾಣ ಮಾಡಬೇಕು ಹಾಗೂ ಮಕ್ಕಳ ರಕ್ಷಣೆಯಲ್ಲಿ ಪೋಲಿಸ್ ಇಲಾಖೆ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ, ಸರಕಾರದ ಇತರ ಇಲಾಖೆಗಳು ಹಾಗೂ ಸರಕಾರೇತರ ಸಂಘ-ಸಂಸ್ಥೆಗಳು ಮಕ್ಕಳ ರಕ್ಷಣೆಗೆ ಸದಾ ಸಿದ್ಧವಿದೆ ಎಂದು ಮಾತನಾಡಿದರು.

Child_line_prgma_6 Child_line_prgma_7 Child_line_prgma_8 Child_line_prgma_9 Child_line_prgma_10 Child_line_prgma_11

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ.ಎಸ್.ಪಿ ಚೆಂಗಪ್ಪ, ಅಧ್ಯಕ್ಷರು ವಕೀಲರ ಸಂಘ ಮಂಗಳೂರು. ಶ್ರೀ.ರಾಘವೇಂದ್ರ, ಕಾರ್ಯದರ್ಶಿಗಳು, ವಕೀಲರ ಸಂಘ ಮಂಗಳೂರು, ಶ್ರೀ ರೆನ್ನಿ ಡಿಸೋಜ, ನಿರ್ದೇಶಕರು ಪಡಿ ಸಂಸ್ಥೆ, ಮಂಗಳೂರು. ನಗರ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶ್ರೀಮತಿ.ಗುಲಾಬಿ, ಶ್ರೀ.ದಿನೇಶ್ ಅಂಚನ್, ಅಧ್ಯಕ್ಷರು,ಜಪ್ಪಿನ ಮೊಗರು ಯುವಕ ಮಂಡಲ ಹಾಗೂ ಕಾಣೆಯಾದ ಮಕ್ಕಳ ಬ್ಯೂರೋ ದ.ಕ, ಸಂಯೋಜಕರಾದ ಶ್ರೀ.ರವಿಚಂದ್ರ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಚೈಲ್ಡ್‌ಲೈನ್ ಮಂಗಳೂರು-1098 ರ ಕೇಂದ್ರ ಸಂಯೋಜನಾಧಿಕಾರಿಯಾದ ಶ್ರೀ.ಸಂಪತ್ ಕಟ್ಟಿ, ತಂಡ ಸದಸ್ಯೆ ಶ್ರೀಮತಿ.ಅಸುಂತ ಡಿ’ಸೋಜ, , ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಶ್ರೀ.ವಜಿರ್ ಅಹಮದ್ ಹಾಗೂ ಕು.ವನಿತ ಹಾಗೂ ಜಪ್ಪಿನ ಮೊಗರು ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 60 ಕ್ಕೂ ಹೆಚ್ಚು ಮಕ್ಕಳು ಹಾಗೂ ಮಕ್ಕಳ ಹೆತ್ತವರು ಬಾಗವಹಿಸಿದ್ದರು. ಶ್ರೀ.ವಜೀರ್ ಅಹಮದ್ ಸ್ವಾಗತಿಸಿ, ಶ್ರೀ.ಸಂತೊಷ್ ಬಜಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.

Write A Comment