ಕರ್ನಾಟಕ

ಗಡಿ ವಿವಾದ : ಸರಕಾರವನ್ನು ಎಚ್ಚರಿಸಲು ಗಡಿ ಕನ್ನಡಿಗರ ನಿರ್ಧಾರ

Pinterest LinkedIn Tumblr

Jinadatta-Desai

ಬೆಳಗಾವಿ ಮೇ 24 -ನಿದ್ರೆಯಲ್ಲಿರುವ ರಾಜ್ಯ ಸರಕಾರವನ್ನು ಹಾಗೂ ಅವಕಾಶವಾದಿ ಶಾಸಕ ಮತ್ತು ಸಂಸದರನ್ನು ಎಚ್ಚರಿಸಿ, ರಾಜ್ಯದ ಗಡಿ ಸಲಹಾ ಸಮಿತಿಯನ್ನು ಚುರುಗೊಳಿಸಲು ಕನ್ನಡ ಸಂಘಟನೆಗಳ ಮುಖಂಡರು, ಸಾಹಿತಿಗಳು ನಿರ್ಧರಿಸಿದರು. ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ನಿವೃತ್ತ ನ್ಯಾಯಮೂರ್ತಿ ಜಿನದತ್ತ ದೇಸಾಯಿ

ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕನ್ನಡ ಮುಖಂಡರು ಮಾತನಾಡಿ, ರಾಜ್ಯ ಸರಕಾರ ನಿದ್ರೆ ಮಾಡುತ್ತಿರುವುದರಿಂದ ಹಾಗೂ ಶಾಸಕರು ಮತ್ತು ಸಂಸದರು ಅವಕಾಶವಾದಿತನದಿಂದ ಹೊರಗೆ ಬಾರದಿರುವುದರಿಂದ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದ ಬಿಸಿ ಈಗ ಸ್ವಾಭಿಮಾನಿ ಕನ್ನಡರನ್ನು ಕೆರಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವನ್ನು ಮಹಾರಾಷ್ಟ್ರವು ಸರ್ವೋಚ್ಚ ನ್ಯಾಯಾಲಯಕ್ಕೆ ಒಯ್ದಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದಲ್ಲಿ ಕರ್ನಾಟಕದ ಪರ ಸಮರ್ಥ ವಾದ ಮಂಡಿಸದೇ ಇದ್ದರೆ ಕರ್ನಾಟಕವು ಬೆಳಗಾವಿಯನ್ನು ಮರೆತು ಬಿಡಬೇಕಾದ ಪ್ರಸಂಗ ಬಂದರೆ ಅಚ್ಚರಿ ಇಲ್ಲ, ಮುಂದೆ ಎದುರಾಗಬಹುದಾದ ಸಮಸ್ಯೆಗಳ ಎಚ್ಚರಿಕೆಯಲ್ಲಿ ಸಮರ್ಥ ವಾದ ಮಾಡುವಂಥ  ವಕೀಲರನ್ನು ನೇಮಿಸುವ ಮೂಲಕ ಗಡಿ ಸಮಿತಿಗೆ ಶಕ್ತಿ ತುಂಬಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಸಾಜ್ಯ ಸಮಿತಿಗೆ ಎಚ್ಚ.ಕೆ.ಪಾಟೀಲ ಅಥವಾ ನ್ಯಾಯಮೂರ್ತಿ ವಿ.ಎಸ್. ಮಳಿಮಠ ಅಥವಾ ಪ್ರಹ್ಲಾದ್ ಜೋಶಿ ಯಾರನ್ನೇ ನೇಮಿಸಿದರೂ ಪರವಾಗಿಲ್ಲ, ಸಮರ್ಥ ದಾಖಲೆ ಸಂಗ್ರಹಿಸುವ,  ಗಡಿ ವಿವಾದದಲ್ಲಿ ಕನ್ನಡಿಗರನ್ನು ಎಚ್ಚರಿಸುವ ಕೆಲಸ ಮಾಡುವಂಥ ಸಮರ್ಥರ ಅಗತ್ಯವಿದೆ. ಅದಕ್ಕೆ ತಕ್ಷಣ ಸಮರ್ಥ ಅಧ್ಯಕ್ಷರನ್ನು ಹಾಗೂ ವಾದ ಮಾಡಲು ತಜ್ಞರನ್ನು ನೇಮಿಸುವಂತೆ ಆಗ್ರಹಿಸಿದರು. ರಾಜ್ಯಮಟ್ಟದಲ್ಲಿರುವ ಗಡಿ ಸಲಹಾ ಸಮಿತಿ ಸಂಪೂರ್ಣ ನಿಷ್ಕ್ರೀಯವಾಗಿದೆ. ಗಡಿ ಸಮಸ್ಯೆಯ ಗಂಭೀರತೆಯನ್ನು ಕಡೆಗಣಿಸಿದೆ, ಕನ್ನಡಿಗರ ಭಾವನೆಗಳನ್ನು ಕ್ರೌಢೀಕರಿಸುವ ಆಸಕ್ತಿ ವಹಿಸಿಲ್ಲ. ಎದುರಾಳಿ ಮಹಾರಾಷ್ಟ್ರ ಸರಕಾರ ತನ್ನ ವಾದಕ್ಕೆ ಬೇಕಾದ ಎಲ್ಲ ದಾಖಲೆ ಸಂಗ್ರಹಿಸಿ ತಜ್ಞ ನ್ಯಾಯವಾದಿಗಳನ್ನು ವಾದಕ್ಕೆ ನೇಮಿಸಿದೆ. ಇದು ಕರ್ನಾಟಕಕಕ್ಕೆ ಆತಂಕ ಮೂಡಿಸುವ ಸನಿವೇಶ ಆಗಿದ್ದರೂ ರಾಜ್ಯ ಸರಕಾರ ಗಡಿ ಕನ್ನಡಿಗರ ಹಾಗೂ ಗಡಿ ಭಾಗದ ರಕ್ಷಣೆಗೆ ಬದ್ದತೆ ತೋರುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲಾ ಮಟ್ಟದಲ್ಲಿಯೇ ಗಡಿ ರಕ್ಷಣಾ ಸಮಿತಿಯೊಂದನ್ನು ರಚಿಸಿಕೊಂಡು, ಈ ಭಾಗದ ಆಸಕ್ತರನ್ನು ಕೂಡಿಸಿಕೊಂಡು ಸಮಿತಿಯನ್ನು ಬಲಪಡಿಸಿ ನಂತರ ರಾಜ್ಯ ಮಟ್ಟದಲ್ಲಿಯ ಸಮಿತಿಗೆ ಶಕ್ತಿ ತುಂಬುವ ಪ್ರಯತ್ನಕ್ಕೆ ಇಂದಿನ ಸಭೈ ಒಪ್ಪಿಗೆ ನೀಡಿತು.

ಬೆಳಗಾವಿ, ಉತ್ತರ ಕರ್ಣಾಟಕ ಸೇರಿದಂತೆ ರಾಜ್ಯದ ಎಲ್ಲ ಭಾಗಗಳಿಂದ ಗಡಿ ವಿವಾದದ ಹಿನ್ನೆಲೆಯಲ್ಲಿ ಉಂಟಾಗಿರುವ ಆತಂಕದ ಬಗ್ಗೆ ಪರಿಹಾರ ಕಂಡುಕೊಳ್ಳಲು ಚಿಂತರನ್ನು ಸೇರಿಸಿಕೊಂಡು ಹೋರಾಟ ನಡೆಸಬೇಕು, ಬೆಂಗಳೂರಲ್ಲೊಂದು ಪ್ರತಿಭಟನೆ ನಡೆಸಬೇಕು, ಮುಖ್ಯಮಂತ್ರಿಗಳನ್ನು ಎಚ್ಚರಿಸುವ ಸಲುವಾದಿ ವಿಧಾನ ಸೌಧ ಚಲೋ ನಡೆಸಬೇಕು, ಗಡಿ ವಿಷಯದ ಬಗ್ಗೆ ರಾಜಕಾರಣ ಮಾಡುವ ಶಾಸಕರು, ಸಂಸದರು ಹಾಗೂ ಸಚಿವರ ವಿರುದ್ದ ಕಠಿಣ ಸಂದೇಶ ರವಾನಿಸಿ ಮುಂದಿನ ಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸಬೇಕೆಂಬ ಹತ್ತು ಹಲವು ಸಲಗೆಗಳು ಕೇಳಿಬಂದವು.

ಮಾಜಿ ಮಹಾಪೌರ ಸಿದ್ದನಗೌಡ ಪಾಟೀಲ, ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಉತ್ತರ ಕರ್ನಾಟಕ ಹೋರಾಟ ವೇದಿಕೆಯ ಪ್ರೋ ಟಿ.ಟಿ. ಮುರಕಟ್ನಾಳ, ಪ್ರಕಾಶ ದೇಶಪಾಂಡೆ, ಎ. ಆರ್. ಚಿಕ್ಕಮಠ, ಶಂಕರ ಬಾಗೇವಾಡಿ, ಮೆಹಬೂಬ ಮಕಾನದಾರ, ಶಶಿಧರ ಘಿವಾರಿ, ಶ್ರೀನಿವಾಸ ತಾಳೂಕರ ಸೇರಿದಂತೆ ಅನೇಕರು ತಮ್ಮ ತಮ್ಮ ಸಲಹೆಗಳನ್ನು ನೀಡಿದರು.

Write A Comment