ಕರ್ನಾಟಕ

ಕರ್ನಾಟಕ ಚಿಕ್ಕಮಗಳೂರಿನಲ್ಲಿ ನಕ್ಸಲರ ಟೆಂಟ್ ಪತ್ತೆ

Pinterest LinkedIn Tumblr

13-1431516664-05-1430790539-04-1430763473-naxal

ಚಿಕ್ಕಮಗಳೂರು, ಮೇ 13 : ಮಲೆನಾಡು ಭಾಗದಲ್ಲಿ ನಕ್ಸಲರು ಇನ್ನೂ ಸಕ್ರಿಯರಾಗಿದ್ದಾರೆ ಎಂಬುದಕ್ಕೆ ಪುರಾವೆ ಸಿಕ್ಕಿದೆ. ನಕ್ಸಲ್ ನಿಗ್ರಹಪಡೆ ಕೂಂಬಿಂಗ್ ನಡೆಸುವ ವೇಳೆ ನಕ್ಸಲರ ಟೆಂಟ್ ಪತ್ತೆಯಾಗಿದೆ. ಡಿಟೋನೇಟರ್ ಸೇರಿದಂತೆ ಹಲವು ವಸ್ತುಗಳನ್ನು ಟೆಂಟ್‌ನಿಂದ ವಶಪಡಿಸಿಕೊಳ್ಳಲಾಗಿದೆ.

ಬುಧವಾರ ಶೃಂಗೇರಿಯಲ್ಲಿ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ನಡೆಸುವ ವೇಳೆ ನಕ್ಸಲರ ಟೆಂಟ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಕೂಂಬಿಂಗ್ ಕಾರ್ಯ ಕೈಗೊಳ್ಳಲಾಗಿತ್ತು.

ನಕ್ಸಲರ ಟೆಂಟ್‌ನಲ್ಲಿ 8 ಡಿಟೋನೇಟರ್, ನಕ್ಸಲ್ ಸಾಹಿತ್ಯದ ಪುಸ್ತಕ, ಅಡುಗೆ ಸಾಮಾಗ್ರಿ ಮುಂತಾದ ವಸ್ತುಗಳು ಪತ್ತೆಯಾಗಿವೆ ಎಂದು ನಕ್ಸಲ್ ನಿಗ್ರಹಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಪರಾರಿಯಾಗಿರುವ ನಕ್ಸಲರನ್ನು ಹುಡುಕಲು ಕೂಂಬಿಂಗ್‌ಅನ್ನು ಚುರುಕುಗೊಳಿಸಲಾಗಿದೆ.

ಇಬ್ಬರು ಶರಣಾಗಿದ್ದರು : ಕರ್ನಾಟಕದ ನಕ್ಸಲ್ ಚಳುವಳಿಯಲ್ಲಿ ತೊಡಗಿಕೊಂಡಿದ್ದ ಇಬ್ಬರು ನಕ್ಸಲ್ ನಾಯಕರು 2014ರ ಡಿಸೆಂಬರ್‌ನಲ್ಲಿ ಪೊಲೀಸರಿಗೆ ಶರಣಾಗಿದ್ದರು. ನೂರ್‌ ಜುಲ್ಫೀಕರ್‌ ಮತ್ತು ಸಿರಿಮನೆ ನಾಗರಾಜ್‌ ಪೊಲೀಸರಿಗೆ ಶರಣಾಗಿ, ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಂಡಿದ್ದಾರೆ.

ಕಳೆದ ವಾರ ಕೊಯಮುತ್ತೂರಿನಲ್ಲಿ ನಾಲ್ಕು ರಾಜ್ಯಗಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕೇರಳದ ನಕ್ಸಲ್ ನಾಯಕ ರೂಪೇಶ್ ಮತ್ತು ಆತನ ಪತ್ನಿ ಶೈನಾ ಸೇರಿದಂತೆ ಐವರನ್ನು ಬಂಧಿಸಿದ್ದರು. ದಕ್ಷಿಣದ ರಾಜ್ಯಗಳಲ್ಲಿ ಇವರು ಚಳವಳಿ ವಿಸ್ತರಿಸಲು ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿತ್ತು.

Write A Comment