ಕರ್ನಾಟಕ

ಸ್ನೇಕ್ ಶ್ಯಾಮ್ ಮನೆಯಲ್ಲಿ 80 ಮರಿಗಳಿಗೆ ಜನ್ಮ ನೀಡಿದ ಹಾವು

Pinterest LinkedIn Tumblr

5148snake2

ವಿಶ್ವ ತಾಯಂದಿರ ದಿನದಂದೇ ಮೈಸೂರಿನ ಸ್ನೇಕ್ ಶ್ಯಾಮ್ ಅವರು ಶನಿವಾರ ರಿಂಗ್ ರಸ್ತೆಯಲ್ಲಿ ರಕ್ಷಣೆ ಮಾಡಿದ್ದ ಕೊಳಕು ಮಂಡಲ ಹಾವೊಂದು ಬರೋಬ್ಬರಿ 80 ಮರಿಗಳಿಗೆ ಜನ್ಮ ನೀಡಿ ಅಚ್ಚರಿಗೆ ಕಾರಣವಾಗಿದೆ.

ನಿನ್ನೆ ಮಧ್ಯರಾತ್ರಿ 1 ಗಂಟೆ ಸರಿ ಸುಮಾರಿನಲ್ಲಿ ಮೈಸೂರಿನ ಬೃಂದಾವನ ಬಡಾವಣೆಯಲ್ಲಿದ್ದ ಕೊಳಕು ಮಂಡಲ ಹಾವನ್ನು ಸ್ನೇಕ್ ಶ್ಯಾಮ್ ರಕ್ಷಣೆ ಮಾಡಿ ತಮ್ಮ ಮನೆಗೆ ಕರೆತಂದಿದ್ದರು.

ಇಂದು ಬೆಳಗ್ಗೆ 7.30ರ ಸಮಯದಲ್ಲಿ ಮನೆಯನ್ನು ಸ್ವಚ್ಚ ಮಾಡಲು ಬಂದ ಸ್ನೇಕ್‍ಶ್ಯಾಮ್ ಅವರ ಮಗಳಿಗೆ ಈ ಹಾವು ಮರಿಗಳಿಗೆ ಜನ್ಮ ನೀಡಿರುವ ವಿಚಾರ ಗೊತ್ತಾಗಿದ್ದು ತಕ್ಷಣ ತಂದೆಗೆ ತಿಳಿಸಿದ್ದು ಅಲ್ಲಿಗೆ ಬಂದ ಸ್ನೇಕ್ ಶ್ಯಾಮ್ ಸಂತಸ ವ್ಯಕ್ತಪಡಿಸಿದ್ದು ಈಗಾಗಲೇ ಈ ಮರಿಗಳನ್ನು ನೋಡಲು ಸಾರ್ವಜನಿಕರು ಧಾವಿಸುತ್ತಿದ್ದಾರೆ.

Write A Comment