ಕರ್ನಾಟಕ

ನನ್ನನ್ನು ಅಮಾನತು ಮಾಡಲು ಯಾರಿಂದಲೂ ಸಾಧ್ಯವಿಲ್ಲ: ನಡಹಳ್ಳಿ

Pinterest LinkedIn Tumblr

nadahalli

ಬಾಗಲಕೋಟೆ: ನನ್ನನ್ನು ಅಮಾನತು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಮಾಡಿದರೂ ಕಾನೂನು ಹೋರಾಟ ಮಾಡುತ್ತೇನೆ. ಮೇಕೆದಾಟು ಯೋಜನೆಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ.  ಕಳಸಾ -ಬಂಡೂರಿ ಯೋಜನೆಗೆ ಯಾವುದೇ ಮಹತ್ವ ನೀಡಿಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದು ಬೇಡ ಎಂದು ಬಾಗಲಕೋಟೆಯಲ್ಲಿ ಶಾಸಕ ನಡಹಳ್ಳಿ ಟೀಕಿಸಿದ್ದಾರೆ.

ಸರಕಾರ ಹಾಗೂ ಪಕ್ಷಕ್ಕೆ ಮುಜುಗರ ಉಂಟುಮಾಡುವ  ಹೇಳಿಕೆ ನೀಡಿದ್ದ ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ  ಸದಸ್ಯತ್ವದಿಂದ ಅಮಾನತುಗೊಳಿಸಿ ಆದೇಶ ನೀಡಲಾಗಿತ್ತು.  ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆಗೆ ಆಗ್ರಹಿಸಿದ್ದ ನಡಹಳ್ಳಿ, ಉತ್ತರ ಕರ್ನಾಟಕದ ಅಭಿವದ್ಧಿ ಯೋಜನೆಗಳನ್ನು ಹಾಲಿ ಸರಕಾರ ನಿರ್ಲಕ್ಷಿಸಿದೆ.

ಕಷ್ಣಾ ಕೊಳ್ಳದ ಯೋಜನೆಗಳಿಗೆ 10 ಸಾವಿರ ಕೋಟಿ ರೂ. ಮೀಸಲಿಡುವ ಮಾತನಾಡಿದ್ದ ಸಿದ್ದರಾಮಯ್ಯ ಈಗ ಮಾತಿಗೆ ತಪ್ಪಿದ್ದಾರೆ ಎಂದು ನಡಹಳ್ಳಿ ಹೇಳಿಕೆ ನೀಡಿದ್ದರು. ಇದರಿಂದ ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ನಡಹಳ್ಳಿ ಅವರನ್ನು ಅಮಾನತುಗೊಳಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷ ಆದೇಶ ನೀಡಿತ್ತು.
-ಕೃಪೆ: ವೆಬ್ ದುನಿಯಾ

Write A Comment