ಕರ್ನಾಟಕ

ಶಾಸಕ ಸ್ಥಾನದಿಂದ ನಡಹಳ್ಳಿ ವಜಾಕ್ಕೆ ಚಿಂತನೆ : ಪರಮೇಶ್ವರ್

Pinterest LinkedIn Tumblr

G. Parameshwar_0_0_0

ಬೆಂಗಳೂರು, ಏ.28: ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಹಿರಂಗ ಹೇಳಿಕೆ ನೀಡಿರುವ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರನ್ನು ಈಗಾಗಲೇ ಶಾಸಕಾಂಗ ಪಕ್ಷದಿಂದ ಅಮಾನತ್ತು ಗೊಳಿಸಲಾಗಿದೆ. ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸುವ ಕುರಿತು ಹೈಕಮಾಂಡ್ ಸಲಹೆ ಪಡೆಯಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ.ಎಸ್.ಪಾಟೀಲ್ ನಡಳ್ಳಿ ಅವರಿಗೆ ಪಕ್ಷದಿಂದ ನೋಟಿಸ್ ನೀಡಲಾಗಿತ್ತು. ಅವರು ಉತ್ತರ ನೀಡಿದ್ದು, ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥಹಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಶಾಸಕಾಂಗ ಪಕ್ಷದ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಸಲಹೆಯನ್ನು ಕೇಳಿ ಅವರು ಈಗ ಅಮಾನತು ಮಾಡಿದ್ದಾರೆ. ಉಚ್ಛಾಟನೆ ಅಥವಾ ಶಾಸಕಾಂಗದಿಂದ ಅನರ್ಹ ಗೊಳಿಸುವ ಕುರಿತು ಹೈಕಮಾಂಡ್‌ನ ಅಭಿಪ್ರಾಯ ಪಡೆಯಲಾಗುವುದು ಎಂದು ಹೇಳಿದರು.

ಯಾವುದೇ ಪಕ್ಷದ ಶಾಸಕರಾದರೂ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಪರಮೇಶ್ವರ್ ಎಚ್ಚರಿಸಿದರು. ನಡಳ್ಳಿ ಅವರ ಅಮಾನತ್ತಿನ ಹಿಮದೆ ಯಾವುದೇ ಆತುರದ ನಿರ್ಧಾರವಿಲ್ಲ. ಎಲ್ಲವನ್ನೂ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಅವರು ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಾರೆ. ಶೀಘ್ರವೇ ಭೇಟಿಯಾಗುತ್ತೇನೆ ಎಂದರು.

ಶೀಘ್ರವೇ ಸಂಪುಟ ಪುನರ್‌ರಚನೆ:
ಗ್ರಾಮ ಪಂಚಾಯ್ತಿ ಚುನಾವಣೆ ನಂತರ ಸಂಪುಟ ಪುನರ್ ರಚನೆಯಾಗಲಿದೆ. ಯಾರನ್ನು ಕೈ ಬಿಡಬೇಕು, ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಾವು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಿಗಮ ಮಂಡಳಿಗಳಿಗೆ ನಿರ್ದೇಶಕರುಗಳನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ಅವರು ಹೇಳಿದರು. ನನ್ನ ವಿರುದ್ಧ ಕೆಲವರು ಬೇಷರ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ರಾಜಕಾರಣದಲ್ಲಿ ಇಂತಹ ಭಾವನೆಗಳು ಸಹಜ. ಅವು ಆಧಾರ ರಹಿತ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಶೀಥಲ ಸಮರವಿದೆ ಎಂಬ ವದಂತಿ ಹಬ್ಬಿಸಲಾಗಿತ್ತು. ಅಂತಹ ಯಾವ ಸುದ್ದಿಗಳು ನಿಜವಲ್ಲ ಎಂದರು.

ಸಾಧನೆ ಸಮಾವೇಶ: ಮೇ 13ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದು ಎರಡು ವರ್ಷಗಳಾಗಲಿವೆ. ಪ್ರಣಾಳಿಕೆಯಲ್ಲಿ ಘೋಷಿಸಿದ ಸಾಕಷ್ಟು ಭರವಸೆಗಳನ್ನು ಸಾರ್ಕರ ಘೋಷಿಸಿದೆ. ನಮ್ಮ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ರಾಜ್ಯ ಮಟ್ಟದ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಜಾಗದಲ್ಲಿ ಸಮಾವೇಶ ಮಾಡುವ ಚಿಂತನೆ ಇದೆ. ದಿನಾಂಕ ಮತ್ತು ಸ್ಥಳವನ್ನು ಶೀಘ್ರವೇ ನಿಗದಿ ಮಾಡಲಾಗುವುದು. ಒಂದು ವೇಳೆ ಗ್ರಾಪಂ ಚುನಾವಣೆ ಘೋಷಣೆಯಾದರೂ ಪಕ್ಷದ ವತಿಯಿಂದ ಸಮಾವೇಶ ನಡೆಸಲಾಗುತ್ತದೆ ಎಂದು ತಿಳಿಸಿದರು. ಒಂದು ವರ್ಷದ ವೇತನ ದೇಣಿಗೆ:ನೇಪಾಳ ಭೂಕಂಪ ಸಂತ್ರಸ್ಥರ ನೋವಿಗೆ ಕಾಂಗ್ರೆಸ್ ಸ್ಪಂದಿಸಲಿದೆ. ಈಗಾಗಲೇ ಶಾಸಕರುಗಳು ಒಂದು ತಿಂಗಳ ವೇತನ ನಿಇಡಿದ್ದಾರೆ. ಕಾರ್ಯಕರ್ತರು ಮತ್ತು ಮುಖಂಡರುಗಳು ತಮ್ಮ ಶಕ್ತಿ ಮೀರಿ ಸಹಾಯ ಮಾಡಬೇಕು ಎಂದು ಕರೆ ನಿಇಡಿದ ಪರಮೇಶ್ವರ್ ತಮ್ಮ ವಿಧಾನಪರಿಷತ್ತಿನ ಸದಸ್ಯ ಸ್ಥಾನದಿಂದ ಬರುವ ಒಂದು ವರ್ಷದ ವೇತನವನ್ನು ಸಂತ್ರಸ್ತರ ನೆರವರಿಗೆ ದೇಣಿಗೆ ರೂಪದಲ್ಲಿ ನೀಡುವುದಾಗಿ ಹೇಳಿದರು.

Write A Comment