ಕುಡಿಯಲು ನೀರು ಕೇಳಲು ಬಂದ ಯುವಕನೊಬ್ಬ ಮನೆಗೆ ನುಗ್ಗಿ ವಯೋವೃದ್ದ ಮುದುಕಿಯನ್ನು ಅತ್ಯಾಚಾರ ಮಾಡಿದ ಹೇಯ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ತಾವರೆಕೆರೆ ಬಳಿಯ ಉಪಕಾರ್ ಲೇ ಔಟ್ನಲ್ಲಿ 76ರ ವಯಸ್ಸಿನ ಅಜ್ಜಿ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಮಂಗಳವಾರ ರಾತ್ರಿ 9ರ ಸುಮಾರಿಗೆ ಕೂಲಿ ಕಾರ್ಮಿಕ ಮಣಿಕಂಠ ಎಂಬ ಯುವಕ ಬಾಗಿಲು ಬಡಿದು ನೀರು ಬೇಕು ಎಂದು ಕೇಳಿದ್ದು ಆತನನ್ನು ಕಿಟಕಿ ಮೂಲಕ ನೋಡಿದ ಅಜ್ಜಿ ಬಾಗಿಲು ಮುಚ್ಚಿದ್ದಾರೆ ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಯುವಕ ಕಿಟಕಿ ಬಾಗಿಲು ಒಡೆದು ಒಳಗೆಬಂದಿದ್ದು ವೃದ್ಧೆಯ ಬಾಯಿಗೆ ಬಟ್ಟೆ ತುರುಕಿ , ಕೈ ಕಾಲು ಕಟ್ಟಿ ಅತ್ಯಾಚಾರ ಎಸಗಿದ್ದಾನೆ. ಬೆಳಗಿನ ಜಾವ ಮೂರು ಘಂಟೆ ವರೆಗೆ ಅಲ್ಲಿಯೇ ಇದ್ದ ಆತ ತಪ್ಪಿಸಿಕೊಳ್ಳಲು ಯತ್ನಿಸಿದ ಸಮಯದಲ್ಲಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು, ಸ್ಥಳೀಯರು ಯಥಾ ಶಕ್ತಿ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.