ಕರ್ನಾಟಕ

​​ಬೆಂಗಳೂರಿನ ಒಂದೇ ದಿನದಲ್ಲಿ ಮೂವರು ಆತ್ಮಹತ್ಯೆ

Pinterest LinkedIn Tumblr

SUCIDE

ಬೆಂಗಳೂರು,ಏ.7- ನಗರದಲ್ಲಿ ನವವಿವಾಹಿತೆ ಸೇರಿದಂತೆ  ವಿವಿಧ ವ್ಯಾಪ್ತಿಗಳಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಜ್ಞಾನಭಾರತಿ: ನವಿವಾಹಿತೆಯೊಬ್ಬರು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ವರ್ಷ 3 ತಿಂಗಳ ಹಿಂದಷ್ಟೇ ದೀಪಕ್ ಎಂಬುವರನ್ನು ಮದುವೆಯಾಗಿದ್ದ ರಾಧ(21)  ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ನಾಗರಬಾವಿಯ 12ನೇ ಬ್ಲಾಕ್ 3ನೇ ಮುಖ್ಯರಸ್ತೆಯ ನಿವಾಸದಲ್ಲಿ ದಂಪತಿ ವಾಸವಾಗಿದ್ದರು.  ನಿನ್ನೆ ಸಂಜೆ 4ರ ಸಮಯದಲ್ಲಿ ಪತಿ ಹೊರಗೆ ಹೋಗಿದ್ದಾಗ ರಾಧ ಫ್ಯಾನಿಗೆ

ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.  ರಾಮಮೂರ್ತಿನಗರ: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಿಲ್ಲಾರೆಡ್ಡಿನಗರ 5ನೇ ಕ್ರಾಸ್ ನಿವಾಸಿ ರಾಮಪ್ಪ(52) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಈತ, ಪತ್ನಿ ಲಕ್ಷ್ಮಮ್ಮ ಕೆಲಸಕ್ಕೆ ಹೋಗಿದ್ದಾಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಂಜೆ ಲಕ್ಷ್ಮಮ್ಮ ಮನೆಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ.  ಶವವನ್ನು ಅಂಬೇಡ್ಕರ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.  ಸೋಲನದೇವನಹಳ್ಳಿ: ಪತ್ನಿ , ಮಕ್ಕಳನ್ನು ತವರಿಗೆ ಕಳುಹಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೆಸರುಘಟ್ಟ ಹೋಬಳಿ, ದೊಡ್ಡ ಬ್ಯಾಲದ ಕೆರೆ ನಿವಾಸಿ ಬಿ.ಬಿ.ಲಕ್ಷ್ಮಣ(36) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.  ಏ.5ರಂದು ಪತ್ನಿ ಮಕ್ಕಳನ್ನು ತವರಿಗೆ ಕಳುಹಿಸಿದ ಈತ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ಬೆಳಗ್ಗೆ ಸಂಬಂಧಿಕ ಮೂರ್ತಿ ಮನೆಗೆ ಬಂದು ಬಾಗಿಲು ತಟ್ಟಿದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಕಿಟಕಿ ಮೂಲಕ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.  ವೈಯಕ್ತಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಲಾಗಿದೆ.­­­

Write A Comment