ತುಮಕೂರು: ನಿಗೂಢವಾಗಿ ಸಾವನ್ನಪ್ಪಿರುವ ದಕ್ಷ ಹಾಗೂ ಪ್ರಾಮಾಣಿಕ ಐಎಎಸ್ ಅಧಿಕಾರಿ ಡಿ.ಕೆ. ರವಿಯವರ ಕುಟುಂಬದ ನೆರವಿಗೆ ರಾಜ್ಯ ಒಕ್ಕಲಿಗರ ಸಂಘ ಮುಂದಾಗಿದೆ.
ದೊಡ್ಡಕೊಪ್ಪಲಿನಲ್ಲಿ ಇಂದು ನಡೆದ ಡಿ.ಕೆ. ರವಿಯವರ ವೈಕುಂಠ ಸಮಾರಾಧನೆ ವೇಳೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಅಪ್ಪಾಜಿ ಗೌಡ, ಡಿ.ಕೆ. ರವಿಯವರ ತಾಯಿ ಗೌರಮ್ಮನವರಿಗೆ 10 ಲಕ್ಷ ರೂ.ಗಳ ಚೆಕ್ ನೀಡಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಘದ ನಿರ್ಣಯದಂತೆ ಈ ಹಣವನ್ನು ನೀಡಿದ್ದೇವೆಂದು ಹೇಳಿದರಲ್ಲದೇ ಡಿ.ಕೆ. ರವಿಯವರ ಕುಟುಂಬ ಸದಸ್ಯರೊಬ್ಬರಿಗೆ ಕೆಲಸ ನೀಡುವ ಕುರಿತು ಚಿಂತನೆ ನಡೆಸಿರುವುದಾಗಿ ತಿಳಿಸಿದರು.