ಕರ್ನಾಟಕ

ರವಿ ದೇಹವನ್ನು ಮತ್ತೆ ಪೋಸ್ಟ್ ಮಾರ್ಟಂ ಮಾಡಿಸುತ್ತಾ ಸಿಬಿಐ..?

Pinterest LinkedIn Tumblr

57411261DK-Ravi-body-1

ದಕ್ಷ ಅಧಿಕಾರಿ ಡಿ.ಕೆ. ರವಿ ಅವರ ಸಾವಿನ ಪ್ರಕರಣ ಇದೀಗ ಸಿಬಿಐ ಅಂಗಣದಲ್ಲಿದ್ದು, ಪ್ರಕರಣದ ಬಗೆಗಿನ ಸತ್ಯಾಸತ್ಯತೆಯನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಸಿಬಿಐ ಮತ್ತೊಮ್ಮೆ ರವಿ ಅವರ ಶವವನ್ನು ಪೋಸ್ಟ್ ಮಾರ್ಟಂ ನಡೆಸುವ ಸಾಧ್ಯತೆ ನಿಚ್ಚಳವಾಗಿದೆ.

ಈಗಾಗಲೇ ಪೋಸ್ಟ್ ಮಾರ್ಟಂ ವರದಿಯನ್ನು ತೆಗೆದುಕೊಂಡಿರುವ ಸಿಐಡಿ ಅಧಿಕಾರಿಗಳು ಈ ಕುರಿತು ಸಾಕಷ್ಟು ತನಿಖೆ ನಡೆಸಿದ್ದರೂ ಸಹ ಈ ಪ್ರಕರಣದಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳ ಕೈವಾಡ ಹಾಗೂ ರಿಯಲ್ ಎಸ್ಟೆಟ್ ಕುಳಗಳ ಕರಿ ನೆರಳು ಕಂಡು ಬರುತ್ತಿರುವುದರಿಂದ ಮತ್ತೊಮ್ಮೆ ದೊಡ್ದಕೊಪ್ಪಲು ಗ್ರಾಮದಲ್ಲಿರುವ ರವಿ ಅವರ ಸಮಾಧಿಯ ಪಕ್ಕದಲ್ಲಿಯೇ ಶೆಡ್ ಹಾಕಿ ಪೋಸ್ಟ್ ಮಾರ್ಟಂ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅಲ್ಲದೇ ಸಿಬಿಐ ಅಧಿಕಾರಿಗಳು ತನಿಖೆ ಮುಂದುವರೆಸುತ್ತಾ ಹೋದಂತೆ ಯಾವುದಾದರೂ ಹಂತದಲ್ಲಿ ಹಿಂದಿನ ತನಿಖಾಧಿಕಾರಿಗಳು ಸಾಕ್ಷಿ ನಾಶ ಮಾಡಿದ ಅಥವಾ ಪ್ರಕರಣಕ್ಕೆ ಕೃತಕವಾದ ತಿರುವು ನೀಡಿ ಯಾವ ಸಂಗತಿಯನ್ನಾದರೂ ಮುಚ್ಚಿಡುವ ಪ್ರಯತ್ನ ಮಾಡಿದ್ದ ಅಂಶ ಬೆಳಕಿಗೆ ಬಂದಿದ್ದರೆ ಆ ಸಮಯದಲ್ಲಿ ಹಿಂದಿನ ತನಿಖಾ ಸಂಸ್ಥೆಯ ತನಿಖಾಧಿಕಾರಿಗಳಿಗೂ ಅಂದರೆ ಸಿಐಡಿ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಬಹುದು.

ಅಷ್ಟೇ ಅಲ್ಲ, ರವಿ ಅವರಿಗೆ ಕರೆ ಮಾಡಿದ ರಾಜಕಾರಣಿಗಳು, ರಿಯಲ್ ಎಸ್ಟೆಟ್ ಕುಳಗಳು ಸೇರಿದಂತೆ ಮುಖ್ಯಮಂತ್ರಿಯವರನ್ನೂ ವಿಚಾರಣೆಗೆ ಒಳಪಡಿಸಿದರೆ ಅಚ್ಚರಿಯಿಲ್ಲ. ಒಟ್ಟಿನಲ್ಲಿ ತನಿಖೆ ವಿಳಂಬವಾಗಿ ನಡೆದರೂ ಪ್ರಕರಣದ ಸಂಪೂರ್ಣ ಒಳ ತಿರುಳು ಹೊರಕ್ಕೆ ಬರಲಿದೆ.

Write A Comment