ಕರ್ನಾಟಕ

ರವಿ ಪ್ರಕರಣದ ತನಿಖೆ ಸಿಬಿಐ ನಡೆಸಲಿ ಎಂದಿದ್ದ ಅಧಿಕಾರಿಗಳಿಗೆ ನೋಟಿಸ್ ?

Pinterest LinkedIn Tumblr

ravi

ಬೆಂಗಳೂರು: ದಕ್ಷ ಹಾಗೂ ಪ್ರಾಮಾಣಿಕ ಐಎಎಸ್ ಅಧಿಕಾರಿ ಡಿ.ಕೆ. ರವಿಯವರ ಸಾವಿನ ಪ್ರಕರಣವನ್ನು ಸಿಬಿಐ ಗೆ ವಹಿಸುವಂತೆ ಹೇಳಿಕೆ ನೀಡಿದ್ದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಲು ಮುಂದಾಗಿದೆ ಎನ್ನಲಾಗಿದೆ.

ಹಿರಿಯ ಐಎಎಸ್ ಅಧಿಕಾರಿಗಳಾದ ಮದನ್ ಗೋಪಾಲ್ ಹಾಗೂ ಮಣಿವಣ್ಣನ್ ಅವರಿಗೆ ಸರ್ಕಾರ ನೋಟಿಸ್ ನೀಡಲಿದೆ ಎನ್ನಲಾಗಿದ್ದು, ಡಿ.ಕೆ. ರವಿಯವರ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿದ ಬಳಿಕವೂ ಸಿಬಿಐ ತನಿಖೆ ನಡೆಸುವುದು ಸೂಕ್ತ ಎಂದು ಈ ಅಧಿಕಾರಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಕೆಂಗಣ್ಣಿಗೆ ಗುರಿಯಾಗಿದೆ.

ಸರ್ಕಾರ ತಮಗೆ ನೋಟಿಸ್ ನೀಡಲಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿರುವ ಮದನ್ ಗೋಪಾಲ್, ಸರ್ಕಾರ ನೋಟಿಸ್ ನೀಡಿದರೆ ಅದಕ್ಕೆ ಉತ್ತರ ಕೊಡುವೆ. ಕಳೆದ 31 ವರ್ಷಗಳಿಂದ ನಾಗರಿಕ ಸೇವೆಯಲ್ಲಿರುವ ತಮಗೆ ಯಾವ ವಿಷಯಗಳ ಬಗ್ಗೆ ಮಾತನಾಡಬೇಕೆಂಬ ಅರಿವಿದೆ ಎಂದಿದ್ದಾರೆ. ಈ ಹಿಂದೆ ರಶ್ಮಿ ಮಹೇಶ್ ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡಿದ್ದ ಕಾರಣಕ್ಕಾಗಿ ನೋಟಿಸ್ ನೀಡಲಾಗಿತ್ತು.

1 Comment

  1. This what happening in karnataka, If anybody raise their voice against corruption or justice they will be either transferred or killed, Really feeling very sad of about the system.

Write A Comment