ಕರ್ನಾಟಕ

ಸಿಬಿಐ ತನಿಖೆಗಾಗಿ ವಿಧಾನಸೌಧದ ಮುಂದೆ ರವಿ ಕುಟುಂಬದ ಧರಣಿ

Pinterest LinkedIn Tumblr

dara

ಬೆಂಗಳೂರು, ಮಾ.18: ಐಎಎಸ್ ಅಧಿಕಾರಿ ರವಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸುವಂತೆ ಆಗ್ರಹಿಸಿ ಪೋಷಕರು ಹಾಗೂ ಕುಟುಂಬಕ ಸದಸ್ಯರು, ಸ್ನೇಹಿತರು ಇಂದು ವಿಧಾನಸೌಧದ ಮುಂದಿನ ಕೆಂಪೇಗೌಡ ಪ್ರತಿಮೆಯ ಮುಂದೆ ಧರಣಿ ನಡೆಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದೆ. ಇದರಿಂದ ಪ್ರಕರಣದಕ್ಕೆ ಹೊಸ ತಿರುವು ಪಡೆದಿದೆ. ಒಂದೆಡೆ ವಿಧಾನಮಂಡಲದಲ್ಲಿ ಪ್ರತಿಪಕ್ಷಗಳ ಶಾಸಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಇನ್ನೊಂದೆಡೆ ವ್ಯಕ್ತಿಯೊಬ್ಬರು ಹೈಕೋರ್ಟ್‍ಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಇದೆಲ್ಲಕ್ಕಿಂತ ಪ್ರಮುಖವಾಗಿ ರವಿ ಅವರ ತಂದೆ, ತಾಯಿ, ಅಣ್ಣ ಹಾಗೂ ಪೋಷಕರು ಧರಣಿ ಆರಂಭಿಸಿದ್ದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಎಲ್ಲಾ ಹೋರಾಟಗಳಿಗಿಂತಲೂ ಪೋಷಕರು ಕೂಡ ಅಹೋರಾತ್ರಿ ಧರಣಿ ಆರಂಭಿಸಿರುವುದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಹಿಂದೆ ಧರ್ಮಸ್ಥಳದ ಬಳಿ ನಡೆದ ಸೌಜನ್ಯ ಹತ್ಯೆ ಪ್ರಕರಣದಲ್ಲಿ ಪೋಷಕರು ಒತ್ತಾಯ ಮಾಡಿದಾಗ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಸಿಬಿಐಗೆವಹಿಸಿತ್ತು. ಈಗ ಅನ್ಯ ಮಾರ್ಗವಿಲ್ಲದೆ ರವಿ ಅಸಹಜ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಚಿಂತನೆ ನಡೆಸಿದೆ ಎನ್ನಲಾಗಿದೆ.

ಇಂದು ಮಧ್ಯಾಹ್ನದ ವೇಳೆಗೆ ವಿಧಾನಸೌಧದ ಮುಂದಿನ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಆಗಮಿಸಿದ ಪೋಷಕರು ಧರಣಿ ಆರಂಭಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರವಿ ಅವರ ತಾಯಿ ಗೌರಮ್ಮ, ನನ್ನ ಮಗನ ಸಾವಿನ ನಂತರ ಕೌಟುಂಬಿಕ ಕಾರಣ, ವೈಯಕ್ತಿಕ ಕಾರಣ ಎಂದು ಏನೋನೋ ಕಥೆಗಳನ್ನು ಕಟ್ಟಲಾಗುತ್ತಿದೆ. ನನ್ನ ಮಗ ಚಿನ್ನದಂತಹವನು ಹೆಣ್ಣು ಮಕ್ಕಳನ್ನು ಒಳೆಯ ದೃಷ್ಟಿಯಿಂದ ನೋಡುತ್ತಿದ್ದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅನಗತ್ಯವಾದ ಕಥೆಗಳನ್ನು ಕಟ್ಟುತ್ತಿದ್ದಾರೆ. ಅವರ ಮನೆ ಹಾಳಾಗ ಎಂದು ಸಿಟ್ಟಿನಿಂದ ಶಾಪ ಹಾಕಿದರು. ಮುಖ್ಯಮಂತ್ರಿಯಾಗಿ ಅವರು ಕನ್ನ ಹೊಡೆದು ಏನೇನೋ ಕಟ್ಟಿದ್ದಾರೆ. ಅಧಿಕಾರಿಯಾಗಿ ನನ್ನ ಮಗ ಕಾಲಿಗೆ ಚಪ್ಪಲಿ ಇಲ್ಲದಂತೆ ಬದುಕಿದ್ದಾನೆ. ನನ್ನ ಮಗ ದೇಶದ ಮಗ ಎಂದು ಅಳಲು ತೋಡಿಕೊಂಡರು.

ಮನೆಯಲ್ಲಿ ಯಾವ ಗಲಾಟೆಯೂ ಇಲ್ಲ. ಮನೆಯಲ್ಲಿ ಎಲ್ಲರೂ ಹೊಂದಾಣಿಕೆಯಿಂದ ಇದ್ದೇವು ಕೌಟುಂಬಿಕ ಕಾರಣಗಳು ಏನು ಇಲ್ಲ ಎಂದು ಹೇಳಿದ್ದಾರೆ. ರವಿ ಅವರ ಅಣ್ಣ ರಮೇಶ್ ಮಾತನಾಡಿ, ಸಿಐಡಿಯಿಂದ ನನ್ನ ತಮ್ಮನ ಸಾವಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ, ಸಿಬಿಐ ತನಿಖೆಯಿಂದಲೇ ಸಾಧ್ಯ. ನಮಗೆ ನ್ಯಾಯ ಕೊಡಿಸಿ ಇಲ್ಲವಾದರೆ ಇಲ್ಲೇ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದರು. ತಂದೆ ಕರಿಯಣ್ಣ ಕೂಡ ಮಗನ ಸಾವಿಗೆ ನ್ಯಾಯ ಕೇಳಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Write A Comment