ತಾಳಿಕೋಟೆ (ವಿಜಯಪುರ ಜಿಲ್ಲೆ): ಸಾಮಾನ್ಯವಾಗಿ ಆಕಳ ಬೆಲೆ ಸಾವಿರಾರು ರೂಪಾಯಿ ಇರಬಹುದು. ಆದರೆ ಈ ಆಕಳ ಬೆಲೆ ರೂ. 5 ಲಕ್ಷಕ್ಕೂ ಹೆಚ್ಚು! ರೂ. 5ಲಕ್ಷ ಕೊಡ್ತೀನಿ ಅಂದ್ರೂ ಕೊಡೋಕೆ ತಯಾರಿಲ್ಲ ಇದರ ಮಾಲೀಕರು.
ಇದು ಬಸವನ ಬಾಗೇವಾಡಿ ತಾಲ್ಲೂಕು ಉತ್ನಾಳದ ದೇವೀಂದ್ರ ಆರ್.ಪತ್ತಾರ ಅವರ ಕಿಲಾರಿ ಆಕಳು. ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಜಾನುವಾರು ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಈ ಆಕಳು ‘ಜಾತ್ರಾ ಚಾಂಪಿಯನ್’ ಆಗಿದೆ. ಜತೆಗೆ ಅರ್ಬನ್ ಬ್ಯಾಂಕ್ ನೀಡುವ 5 ಗ್ರಾಂ. ಚಿನ್ನ ಬಹುಮಾನ ಪಡೆದುಕೊಂಡಿದೆ.
ಮಾರ್ಟರ್ ಯಾರಿಗೆ ಸೇರಿದ್ದು?
ಬೆಳಗಾವಿ: ತಾಲ್ಲೂಕಿನ ಸೊನೋಳಿ ಗ್ರಾಮದ ಹೊಲದಲ್ಲಿ ಭಾನುವಾರ ಪತ್ತೆಯಾಗಿದ್ದ ಸಜೀವ ‘ಮಾರ್ಟರ್’ ಯಾರಿಗೆ ಸೇರಿದ್ದು ಎಂಬುದು ಇನ್ನೂ ನಿಗೂಢವಾಗಿದೆ.
‘ಮಾರ್ಟರ್ ಯಾರಿಗೆ ಸೇರಿತ್ತು ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ. ಮರಾಠಾ ಲೈಟ್ ಇನ್‌ಫಂಟ್ರಿ ರೆಜಿಮೆಂಟಲ್ (ಎಂಎಲ್‌ಐಆರ್‌ಸಿ), ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರು ಬೆಳಗಾವಿಯಲ್ಲಿ ಸಮರಾಭ್ಯಾಸ ನಡೆಸುತ್ತವೆ. ಹೀಗಾಗಿ ‘ಮಾರ್ಟರ್’ನಲ್ಲಿರುವ ಸೀರಿಯಲ್ ನಂಬರ್ ನಮೂದಿಸಿ, ಇದು ನಿಮಗೆ ಸೇರಿತ್ತೇ ಎಂಬ ವಿವರಣೆ ಕೇಳಿ ಈ ಮೂರು ಸಂಸ್ಥೆಗಳಿಗೆ ಸೋಮವಾರ ಪತ್ರ ಬರೆದಿದ್ದೇನೆ. ಇನ್ನೂ ಉತ್ತರ ಬಂದಿಲ್ಲ’ ಎಂದು ಪೊಲೀಸ್ ಆಯುಕ್ತ ಎಸ್. ರವಿ ‘ಪ್ರಜಾವಾಣಿ’ಗೆ ತಿಳಿಸಿದರು.
ಆನ್‌ಲೈನ್ ಲಾಟರಿ ಸೀಟು ಹಂಚಿಕೆಯಲ್ಲೂ ಗೊಂದಲ
ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿಯಲ್ಲಿ ಲಭ್ಯವಿರುವ ಸೀಟುಗಳನ್ನು ಆನ್‌ಲೈನ್ ಲಾಟರಿ ಮೂಲಕ ಮಾಡಿರುವ ಹಂಚಿಕೆಯಲ್ಲೂ ಗೊಂದಲ ಉಂಟಾಗಿರುವ ಬಗ್ಗೆ ದೂರುಗಳು ಬಂದಿವೆ.
ವಯೋಮಿತಿ ಮೀರಿದ ಮಕ್ಕಳಿಗೂ ಸೀಟು ಹಂಚಿಕೆಯಾಗಿದೆ. ಎರಡು ಮೂರು ಅರ್ಜಿ ಸಲ್ಲಿಸಿದವರಿಗೂ ಸೀಟು ಸಿಕ್ಕಿದೆ. ಅರ್ಜಿದಾರರ ವ್ಯಾಪ್ತಿಗೆ ಬರದ ಶಾಲೆಗಳಲ್ಲಿ ಕೆಲವು ಸೀಟು ಹಂಚಿಕೆಯಾಗಿದೆ. ನಿರ್ದಿಷ್ಟ ಶಾಲೆಗಳಿಗೆ ಬೇಡಿಕೆ ಸಲ್ಲಿಸದವರಿಗೂ ಸೀಟು ದೊರೆತಿದೆ. ಅಸ್ವಿತ್ವದಲ್ಲಿ ಇಲ್ಲದ ಶಾಲೆಗೂ ಸೀಟು ಹಂಚಿಕೆಯಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.
ಸೀಟು ಹಂಚಿಕೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯು ಇದೇ ಮೊದಲ ಬಾರಿಗೆ ಆರ್‌ಟಿಐ ಅಡಿಯಲ್ಲಿ ಲಭ್ಯವಿದ್ದ 1.11 ಲಕ್ಷ ಸೀಟುಗಳನ್ನು ಮಾರ್ಚ್ 13ರಂದು ಆನ್‌ಲೈನ್ ಲಾಟರಿ ಮೂಲಕ ಹಂಚಿಕೆ ಮಾಡಿತ್ತು.