ಕರ್ನಾಟಕ

ಲೈಂಗಿಕ ಹಿಂಸೆ ವಿರೋಧಿಸಿ ಪ್ರತಿಭಟನೆ; 16 ನಿಮಿಷಕ್ಕೆ ಒಂದು ಅತ್ಯಾಚಾರ-ನ್ಯಾಯವಾದಿ ಮತ್ತು ಮಹಿಳಾ­ವಾದಿ ಫ್ಲೇವಿಯಾ ಆಗ್ನೆಸ್

Pinterest LinkedIn Tumblr

pvec020315PMASV-3

ಬೆಂಗಳೂರು: ‘ಮಹಾರಾಷ್ಟ್ರದಲ್ಲಿ ಅತ್ಯಾ­ಚಾರಕ್ಕೊಳಗಾದ ಯುವತಿಗೆ ನೈತಿಕ ಬೆಂಬಲ ನೀಡುವುದರ  ಜೊತೆಗೆ ₨2 ಲಕ್ಷ ಆರ್ಥಿಕ ನೆರವು ನೀಡಲಾಗುತ್ತಿದೆ. ರಾಜ್ಯ­ದಲ್ಲಿಯೂ ಇದು ಜಾರಿಗೆ ಬರ­ಬೇಕು’ ಎಂದು ನ್ಯಾಯವಾದಿ ಮತ್ತು ಮಹಿಳಾ­ವಾದಿ ಫ್ಲೇವಿಯಾ ಆಗ್ನೆಸ್ ಹೇಳಿದರು.

ಲೈಂಗಿಕ ಹಿಂಸೆಯನ್ನು ವಿರೋಧಿಸಿ ಮಹಿಳಾ ಮುನ್ನಡೆ ಮತ್ತು ಕರ್ನಾಟಕ ಜನಶಕ್ತಿ ಸಂಘಟನೆ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಟನಾ ಸಮಾವೇಶ­ದಲ್ಲಿ ಅವರು ಮಾತನಾಡಿದರು. ದೆಹಲಿ ಅತ್ಯಾಚಾರ ಪ್ರಕರಣದ ನಂತರ ದೇಶದಲ್ಲಿ ಕಠಿಣ ಕಾನೂನು ಜಾರಿಗೆ ತರಲಾಗಿದೆ. ಆದರೂ ಅತ್ಯಾ­ಚಾರ ಎಸಗಿರುವವರಿಗೆ ಶಿಕ್ಷೆ ಆಗಿರುವ ಪ್ರಮಾಣ ಕಡಿಮೆ. 16 ನಿಮಿಷಕ್ಕೆ ಒಂದು ಅತ್ಯಾಚಾರ ನಡೆಯುತ್ತಿದೆ ಎಂದರು.

ಅತ್ಯಾಚಾರಗಳನ್ನು ನಿಯಂತ್ರಿಸಲು ಕಾನೂನುಗಳಿಂದ ಮಾತ್ರ ಸಾಧ್ಯವಿಲ್ಲ. ಜನರ ಮನಸ್ಥಿತಿ ಬದಲಾಗಬೇಕು. ಆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿ­ಸಲು ಇಂತಹ ಸಮಾವೇಶ ಹಮ್ಮಿ­ಕೊಂಡಿ­ರುವುದು ಶ್ಲಾಘನೀಯ ಎಂದರು. ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಮಾತ­ನಾಡಿ, ‘ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾ­ಚಾರಗಳಿಗೆ ಬೇರೆಲ್ಲೊ ಕಾರಣ ಹುಡು­ಕುವ ಅಗತ್ಯ ಇಲ್ಲ. ಅದಕ್ಕೆ ಸಮಾಜ, ಸರ್ಕಾ­ರವೇ ಕಾರಣ. ಅತ್ಯಾಚಾರ­ದಂ­ತಹ ಸೂಕ್ಷ್ಮ ಸಮಸ್ಯೆಯನ್ನು ಕಾನೂ­ನಿನ ಮೂಲಕ ಮಾತ್ರ ಪರಿಹರಿಸಲು ಸಾಧ್ಯ’ ಎಂದು ಹೇಳಿದರು.

ಅಸಮಾನತೆ ಮತ್ತು ಲಿಂಗ ತಾರ­ತಮ್ಯದ ನಡುವೆ ನೇರ ಸಂಬಂಧ ಇದೆ. ಅತ್ಯಾಚಾರಕ್ಕೊಳಗಾದವರಲ್ಲಿ ಬಹು­ತೇಕರು ಕೆಳಜಾತಿಯವರಾಗಿದ್ದಾರೆ. ಈ ಸಾಮಾಜಿಕ ತಾರತಮ್ಯ, ದೌರ್ಜನ್ಯದ ವಿರುದ್ಧ ಹೋರಾಟ ನಡೆಯಬೇಕಾದ ಅಗತ್ಯ ಇದೆ ಎಂದು ಹೇಳಿದರು. ಲೇಖಕಿ ದು.ಸರಸ್ವತಿ ಅವರು ಮಾತ­ನಾಡಿ, ‘ಅತ್ಯಾಚಾರ ನಮ್ಮ ಸಮಾಜಕ್ಕೆ ಅಂಟಿರುವ ಕಾಯಿಲೆ. ಮಕ್ಕಳ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗು­ವವರಿಗೆ ಏನು ಪ್ರೇರಣೆ ಎಂದು ತಿಳಿಯು­ತ್ತಿಲ್ಲ.  ಕೊಳಕು ಮನಸ್ಸುಗಳು ಮಾತ್ರ ಇಂತಹ ಕೃತ್ಯ ಎಸಗಲು ಸಾಧ್ಯ’ಎಂದರು. ಸಂಘಟನೆಯ ಸದಸ್ಯರು ನಗರ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನ­ದವ­ರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ವಿಚಾರಣೆ ನಡೆಸಿ ಅನ್ಯಾಯಕ್ಕೊಳಗಾಗದವರಿಗೆ ನ್ಯಾಯ ಒದಗಿಸುವುದು ನ್ಯಾಯಾಲಯದ ಜವಾಬ್ದಾರಿ. ವಿಪರ್ಯಾಸವೆಂದರ ಐವರು ನ್ಯಾಯಮೂರ್ತಿಗಳು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಇದು ಸಮಾಜಕ್ಕೆ ಯಾವ ಸಂದೇಶ ಕೊಡುತ್ತದೆ
–ಡಾ.ಕೆ. ಮರುಳಸಿದ್ದಪ್ಪ

Write A Comment