ಕರ್ನಾಟಕ

ಚುಡಾಯಿಸಿದರೆ ಕಠಿಣ ಶಿಕ್ಷೆ: ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ಎಚ್ಚರಿಕೆ

Pinterest LinkedIn Tumblr

pvec08p2promoartialArt11

ಬೆಂಗಳೂರು: ‘ಮಹಿಳೆಯರೊಂದಿಗೆ ಅನುಚಿತ­ವಾಗಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ಎಚ್ಚರಿಕೆ ನೀಡಿದರು.

ಬೆಂಗಳೂರು ಪ್ರೆಸ್‌ಕ್ಲಬ್‌ ವತಿ­ಯಿಂದ ಶನಿವಾರ ಆಯೋಜಿಸಿದ್ದ ‘ಮಹಿಳಾ ಸುರಕ್ಷತೆ, ಮಹಿಳಾ ಜಾಗೃತಿ ಹಾಗೂ ಪ್ರಚೋದನಕಾರಿರಹಿತ ವಿಷಯ­­ಗಳು’ ಕುರಿತ ವಿಚಾರಸಂಕಿರಣ­ದಲ್ಲಿ ಅವರು ಮಾತನಾಡಿದರು.

‘ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತು ನೀಡ­ಲಾ­ಗು­ತ್ತಿದೆ. ಸುರಕ್ಷತೆ ಬಗ್ಗೆ ಸಾರ್ವ­ಜನಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸ­ಬೇಕಾದ ಅಗತ್ಯ ಇದೆ. ಮಾಧ್ಯಮಗಳು ಸಹ ಸಾರ್ವಜನಿ­ಕರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

ನಂತರ ಮಾತನಾಡಿದ ಹೈಕೋರ್ಟ್‌ ಹಿರಿಯ ವಕೀಲೆ ಸುಶೀಲ ಅವರು, ‘ದೇಶ­ದಲ್ಲಿ ಮಹಿಳೆಯರ  ಸುರಕ್ಷೆಗೆ ಹಲವು ಕಾನೂನುಗಳಿವೆ. ಆದರೆ, ಈ ಕಾನೂನು­ಗಳ ಬಗ್ಗೆ ಹೆಚ್ಚಿನ ಮಹಿಳೆ­ಯರಿಗೆ ಮಾಹಿತಿ ಇಲ್ಲ. ಈ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು ಮತ್ತು ಕಾನೂನು­­ಗಳನ್ನು ಪರಿಣಾಮ­ಕಾರಿಯಾಗಿ ಜಾರಿಗೊಳಿಸಬೇಕು’ ಎಂದರು.

Write A Comment