ಕರ್ನಾಟಕ

ಅಭಿವೃದ್ಧಿಗೆ ದೇಸಿ ತಳಹದಿ ಅಗತ್ಯ: ತರಳಬಾಳು ಹುಣ್ಣಿಮೆ ಉತ್ಸವದಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್‌

Pinterest LinkedIn Tumblr

pvec2115dg2ep

ಜೆ.ಎಚ್‌.ಪಟೇಲ್‌ ವೇದಿಕೆ, ಚನ್ನಗಿರಿ: ‘ಭಾರತದ ಅಭಿವೃದ್ಧಿ ಯಾವುದೇ ದೇಶದ ಅಭಿವೃದ್ಧಿ ಮಾದರಿಯನ್ನು ನಕಲು ಮಾಡುವುದರಿಂದ ಸಾಧ್ಯ ವಾಗುವುದಿಲ್ಲ. ಭಾರತದ ಅಭಿವೃದ್ಧಿ ಆಗಬೇಕಾದರೆ ಅದು ಈ ಮಣ್ಣಿನ ಸಂಸ್ಕೃತಿ, ಸಭ್ಯತೆ ಜತೆ ಸಮ್ಮಿಳಿತ ವಾಗಿರಬೇಕು’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ ಅಭಿಪ್ರಾಯ ಪಟ್ಟರು.

ಸಮೀಪದ ಗರಗ ಕ್ರಾಸ್‌ನ ಕೆಳದಿ ಚೆನ್ನಮ್ಮ ಮಹಾಮಂಪಟದಲ್ಲಿ ತರಳ ಬಾಳು ಹುಣ್ಣಿಮೆ ಮಹೋತ್ಸವದ ಏಳನೇ ದಿನವಾದ ಭಾನುವಾರ ಅವರು ಅತಿಥಿಯಾಗಿ ಮಾತ ನಾಡಿದರು.

ತಮ್ಮ ಭಾಷಣದ ಉದ್ದಕ್ಕೂ ದೇಶದ ಪ್ರಾಚೀನ ಸಂಸ್ಕೃತಿ, ವಿಜ್ಞಾನ ಪರಂಪರೆಯನ್ನು ಉಲ್ಲೇಖಿಸಿದ ರಾಜನಾಥ್ ಸಿಂಗ್‌, ‘ಈ ದೇಶದ ಸಂಸ್ಕೃತಿ ಶ್ರೇಷ್ಠವಾದುದು. ಇಲ್ಲಿ ಯವರು ಮನುಷ್ಯರಲ್ಲಿ ಮಾತ್ರ ದೇವರನ್ನು ಕಾಣಲಿಲ್ಲ. ಪಶು–ಪಕ್ಷಿ, ಗಿಡ–ಮರಗಳಲ್ಲಿ, ಕಲ್ಲು, ಮಣ್ಣಿನಲ್ಲಿ ದೇವರನ್ನು ಕಂಡರು. ಇಂಥ ಸಂಸ್ಕೃತಿ– ಪರಂಪರೆ ನಮಗೆ ಹಿರಿಯರಿಂದ ಬಂದ ಬಳುವಳಿ ಎಂದು ಅವರು ಹೇಳಿದರು.

ಈ ಸತ್ಯಾಂಶವನ್ನು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಂಡು ಕೊಂಡಿದ್ದಾರೆ’ ಎಂದು ರಾಜನಾಥ್ ಸಿಂಗ್‌ ಹೇಳಿದರು.
ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

Write A Comment