ಕರ್ನಾಟಕ

ದರೋಡೆಕೋರರ ಬಂಧನ: ರೂ13 ಲಕ್ಷ ಮೌಲ್ಯದ ವಸ್ತುಗಳ ಜಪ್ತಿ

Pinterest LinkedIn Tumblr

crime

ಬೆಂಗಳೂರು: ದರೋಡೆ ಮತ್ತು ಸರ­ಗಳವು ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ಎಚ್‌ಎಎಲ್‌ ಪೊಲೀಸರು ಚಿನ್ನಾಭರಣ ಸೇರಿದಂತೆ ಸುಮಾರು ₨ 13 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ರಸ್ತೆ ಬಳಿಯ ಪಾದ­ರಾಯನ­ಪುರದ ಯೂನಿಸ್‌, ಅಫ್ರೋಜ್‌ ಮತ್ತು ಇಮ್ತಿಯಾಜ್‌ ಬಂಧಿತರು.

ಆರೋಪಿಗಳು ಆಟೊ ಹಾಗೂ ಬೈಕ್‌ ಕಳವು ಮಾಡುತ್ತಿದ್ದರು. ನಂತರ ಆ ವಾಹನಗಳಲ್ಲಿ ನಗರದ ವಿವಿಧೆಡೆ ಸಂಚರಿಸಿ ಸಾರ್ವಜನಿಕರನ್ನು ಮಾರ­ಕಾಸ್ತ್ರ­ಗಳಿಂದ ಬೆದರಿಸಿ ಚಿನ್ನಾಭರಣ, ಹಣ ದೋಚುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು ಡಿಸೆಂಬರ್‌ನಲ್ಲಿ ಒಂದೇ ದಿನ ಕೆಲವೇ ತಾಸುಗಳ ಅಂತರದಲ್ಲಿ ಮಾರತ್‌ಹಳ್ಳಿ, ಬೊಮ್ಮನಹಳ್ಳಿ ಮತ್ತು ಚಾಮರಾಜಪೇಟೆಯಲ್ಲಿ ದರೋಡೆ ಮಾಡಿದ್ದರು. ಘಟನಾ ದಿನ ಆ ಪ್ರದೇಶ­ಗಳ ವ್ಯಾಪ್ತಿಯ ಮೊಬೈಲ್‌ ಗೋಪುರ­ಗಳ ಮೂಲಕ ಬಂದು ಹೋಗಿರುವ ಕರೆಗಳ ಮಾಹಿತಿ ಕಲೆ ಹಾಕಿದಾಗ ಆರೋಪಿ­ಗಳ ಮೊಬೈಲ್‌ ಸಂಖ್ಯೆಗಳ ಬಗ್ಗೆ ಸುಳಿವು ಸಿಕ್ಕಿತು. ಆ ಸುಳಿವು ಆಧರಿಸಿ ಅವರನ್ನು ಪತ್ತೆಹಚ್ಚಿ ಬಂಧಿಸ­ಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರು ಚಾಮರಾಜಪೇಟೆ, ಮಡಿ­ವಾಳ, ಎಲೆಕ್ಟ್ರಾನಿಕ್‌ಸಿಟಿ, ಎಚ್‌ಎಎಲ್‌, ಮೈಕೊಲೇಔಟ್‌, ಕಲಾಸಿ­­ಪಾಳ್ಯ, ಜಗಜೀವನರಾಂನಗರ, ಸೆಂಟ್ರಲ್‌ ಠಾಣೆ ವ್ಯಾಪ್ತಿಯಲ್ಲಿ ಅಪ­ರಾಧ ಕೃತ್ಯಗಳನ್ನು ಎಸಗಿದ್ದರು. ಅವರ­ನ್ನು ಈ ಹಿಂದೆಯೇ ಬಂಧಿಸ­ಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡು­ಗಡೆಯಾಗಿದ್ದ ಅವರು ಅಪರಾಧ ಚಟು­ವಟಿಕೆಗಳನ್ನು ಮುಂದುವರಿಸಿ­ದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪಿಗಳ ಬಂಧನದಿಂದ 11 ಪ್ರಕರಣ­ಗಳು ಪತ್ತೆಯಾಗಿವೆ. ಅವರಿಂದ 415 ಗ್ರಾಂ ಚಿನ್ನಾಭರಣ, ಬೈಕ್‌ ಮತ್ತು ಕಾರು ಜಪ್ತಿ ಮಾಡಲಾಗಿದೆ.

Write A Comment