ಕರ್ನಾಟಕ

ಬಸ್ ದರ ಇಳಿಕೆ; ಜ.10ರಿಂದ ಪರಿಷ್ಕೃತ ದರ ಜಾರಿ

Pinterest LinkedIn Tumblr

RAMALINGA

ಬೆಂಗಳೂರು: ಡೀಸೆಲ್ ಬೆಲೆ ಗಣನೀಯವಾಗಿ ಇಳಿಕೆ ಕಂಡಿದ್ದರು ರಾಜ್ಯ ಸರ್ಕಾರ ಬಸ್ ಪ್ರಯಾಣ ದರವನ್ನು ಇಳಿಕೆ ಮಾಡಲು ಮೀನಮೇಷ ಏಣಿಸುತ್ತಿದ್ದು, ಇದೀಗ ಪ್ರತಿಭಟನೆ ಮಣಿದಿರುವ ರಾಜ್ಯ ಸರ್ಕಾರ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಪ್ರಯಾಣ ದರ ಇಳಿಕೆ ಮಾಡಿದೆ.

ಬಿಎಂಟಿಸಿ ಮೊದಲ 10 ಹಂತಕ್ಕೆ 1 ರುಪಾಯಿ ಇಳಿಕೆ ಹಾಗೂ ಕೆಎಸ್‌ಆರ್‌ಟಿಸಿ 4 ರಿಂದ 17ನೇ ಹಂತಕ್ಕೆ 2 ರು. ಇಳಿಕೆ ಮಾಡಿದ್ದು, ಕೆಎಸ್‌ಆರ್‌ಟಿಸಿಯ ಮೊದಲ 3 ಹಂತದ ದರ ಇಳಿಕೆ ಮಾಡಿಲ್ಲ. ವೇಗದೂತ ಸಾರಿಗೆ ಪ್ರಯಾಣದ ದರ 1 ರಿಂದ 11 ರುಪಾಯಿವರೆಗೆ ಇಳಿಕೆ ಮಾಡಲಾಗಿದ್ದು, ಈ ಪರಿಷ್ಕೃತ ದರ ಜನವರಿ 10 ರಿಂದ ಜಾರಿಗೆ ಬರಲಿದೆ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.

ಪ್ರಯಾಣ ದರವನ್ನು ಮಾತ್ರ ಇಳಿಕೆ ಮಾಡಿರುವ ರಾಜ್ಯ ಸರ್ಕಾರ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ದರ ಇಳಿಕೆ ಮಾಡಿಲ್ಲ. ಪ್ರತಿಷ್ಠಿತ ವೋಲ್ವಾ ಬಸ್ ಪ್ರಯಾಣ ದರದಲ್ಲೂ ಯಾವುದೇ ಇಳಿಕೆ ಮಾಡಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಬಸ್ ಪ್ರಯಾಣ ದರ ಇಳಿಕೆ ಮಾಡುವ ಭರವಸೆ ನೀಡಿದ್ದ ಸರ್ಕಾರ ಮೀನಾಮೇಷ ಎಣಿಸುತ್ತಿತ್ತು. ಇದೀಗ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇಳಿಕೆ ಮಾಡುವ ಮೂಲಕ ನುಣುಚಿಕೊಂಡಿದೆ.

ದರ ಇಳಿಕೆಯಿಂದ ವರ್ಷಕ್ಕೆ ಸಾರಿಗೆ ಇಲಾಖೆಗೆ 161.76 ಕೋಟಿ ನಷ್ಟವಾಗಲಿದೆ. ಕೆಎಸ್‍ಆರ್‍ಟಿಸಿಗೆ 68.62 ಕೋಟಿ, ಬಿಎಂಟಿಸಿಗೆ 48.06 ಕೋಟಿ ಈಶಾನ್ಯ ಸಾರಿಗೆಗೆ 6.51 ಕೋಟಿ. ವಾಯುವ್ಯ ಸಾರಿಗೆ 38.57 ಕೋಟಿ ನಷ್ಟವಾಗಲಿದೆ ಎಂದು ತಿಳಿಸಿದರು.

ಕೆಎಸ್‍ಆರ್‍ಟಿಸಿಯಲ್ಲಿ ಎಷ್ಟು?: ಕೆಎಸ್‍ಆರ್‍ಟಿಸಿ ಸಾಮಾನ್ಯ ಸಾರಿಗೆಯಲ್ಲಿ ಹಂತ 2ರಲ್ಲಿ 2 ರುಪಾಯಿ ಇಳಿಕೆಯಾಗಿದ್ದರೆ, ಹಂತ 4, 6, 7, 8, 12, 13, 14 15, 16, 17ರಲ್ಲಿ ತಲಾ 1 ರೂ ಇಳಿಕೆಯಾಗಿದೆ. ವೇಗದೂತ ಸಾರಿಗೆಯಲ್ಲಿ ವಿವಿಧ ಹಂತಗಳಲ್ಲಿ 1 ರು.ನಿಂದ 11 ರುವರೆಗೆ ಇಳಿಕೆ ಆಗಿದೆ.

ಕೆಎಸ್‍ಆರ್‍ಟಿಸಿ ದರ ಇಳಿಕೆ ಪೂರ್ಣ ವಿವರ
ಸಾಮಾನ್ಯ ಸಾರಿಗೆ: 2ನೇ ಹಂತದ 2ನೇ ಉಪಹಂತ 2 ರುಪಾಯಿ

ವೇಗದೂತ ಸಾರಿಗೆ
ಇಳಿಕೆ ಹಂತಗಳು
1 ರೂ . 2,5,7,11,13,14,
2 ರೂ . 12,18,19,20,21,22,23,26,27,34,
3 ರೂ . 17,24,25,28,29,30,32,33,35,41,46
4 ರೂ . 31,36,38,39,40,42,44,45,47,50,51,52,54,58
5 ರೂ . 37,43,48,49,53,56,57,59,60,62,63,64,65,66,70,71,76
6 ರೂ . 55,61,68,69,72,74,75,77,78,82,83,
7 ರೂ. 67,73,80,81,84,86,87,88,89,90,94,95,100,106
8 ರೂ. 79,85,92,93,96,97,98,99,101,102,107,118
9 ರೂ . 91,104,105,108,110,111,112,113,119
10 ರೂ. 103,109,114,116,117,120,
11 ರೂ. 115
ನಗರ ಮತ್ತು ಉಪನಗರ ಸಾರಿಗೆ
ಇಳಿಕೆ ಹಂತಗಳು
1 ರೂ. 1,2,13
2 ರೂ. 3

Write A Comment