ಕರ್ನಾಟಕ

ಗುಜರಿ ಅಂಗಡಿ ತಪಾಸಣೆಗೆ ವಿಶೇಷ ಕಾರ್ಯಾಚರಣೆ: ಕಳವು ಪ್ರಕರಣಕ್ಕೆ ಕಡಿವಾಣ ಹಾಕಲು ಕ್ರಮ

Pinterest LinkedIn Tumblr

sdfsdfd copy

ಬೆಂಗಳೂರು: ವಾಹನ ಕಳವು ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ನಗರ ಪೊಲೀಸರು ಮಂಗಳವಾರ ಎಲ್ಲಾ ಠಾಣೆಗಳ ವ್ಯಾಪ್ತಿಯ ಗುಜರಿ ಅಂಗಡಿಗಳ ತಪಾಸಣೆಗೆ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದಾರೆ.

ಪ್ರತಿ ಠಾಣೆಯ ಸಿಬ್ಬಂದಿ ತಮ್ಮ ವ್ಯಾಪ್ತಿಯ ಗುಜರಿ ಅಂಗಡಿಗಳ ಮೇಲೆ ದಾಳಿ ನಡೆಸಿ ದಾಖಲೆಪತ್ರಗಳ ಹಾಗೂ ವಾಹನಗಳ ತಪಾಸಣೆ ಮಾಡಲಿ ದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೆ ಈ ಕಾರ್ಯಾಚರಣೆ ನಡೆಯಲಿದೆ.

‘ವಾಹನ ಕಳ್ಳರು ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ವಾಹನಗಳ ಬಿಡಿಭಾಗಗಳನ್ನು ಬಿಚ್ಚಿ ಗುಜರಿ ಅಂಗಡಿಗೆ ಮಾರುತ್ತಿದ್ದಾರೆ. ಇತ್ತೀಚೆಗೆ ಬಂಧಿಸಿದ್ದ ವಾಹನ ಕಳ್ಳರ ವಿಚಾರಣೆ ಯಿಂದ ಈ ಸಂಗತಿ ಗೊತ್ತಾಗಿದೆ’ ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಪಿ.ಹರಿಶೇಖರನ್‌ ತಿಳಿಸಿದ್ದಾರೆ.

ನಗರದಲ್ಲಿ ಪ್ರತಿ ವರ್ಷ ಕಳವಾ ಗುವ ವಾಹನಗಳಲ್ಲಿ ಶೇ 20ರಷ್ಟು ಗುಜರಿ ಅಂಗಡಿಗಳಿಗೆ ಮಾರಾಟ­ವಾಗುತ್ತಿವೆ. ಉಳಿದ ವಾಹನಗಳನ್ನು ನೆರೆ ರಾಜ್ಯಗಳಿಗೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಗೆ ತೆಗೆದುಕೊಂಡು ಹೋಗಿ ಮಾರಲಾಗುತ್ತಿದೆ ಎಂದು ಹೇಳಿದ್ದಾರೆ.

ಗುಜರಿ ಅಂಗಡಿ ಮಾಲೀಕರು ತಾವು ಖರೀದಿಸುವ ವಾಹನಗಳ ಅಥವಾ ಬಿಡಿಭಾಗಗಳ ಬಗ್ಗೆ ದಾಖಲೆಪತ್ರಗಳನ್ನು ಇಡಬೇಕು. ವಾಹನ ಅಥವಾ ಬಿಡಿಭಾಗಗಳನ್ನು ಮಾರಲು ಬರುವವರ ಹೆಸರು, ವಯಸ್ಸು ಮತ್ತಿತರ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಬೇಕು. ಇಲ್ಲದಿದ್ದರೆ ಅಂತಹ ಮಾಲೀಕರ ವಿರುದ್ಧ ಶಿಸ್ತುಕ್ರಮ ಜರುಗಿಸಲಾ ಗುತ್ತದೆ ಎಂದು ಹರಿಶೇಖರನ್‌ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಬೈಕ್‌, ಆಟೊ, ಕಾರು ಕಳವು ಪ್ರಕರಣಗಳು ಹೆಚ್ಚುತ್ತಿವೆ. 2013ರಲ್ಲಿ 5,356 ಮತ್ತು 2014ರಲ್ಲಿ 5,100 ವಾಹನ ಕಳವು ಪ್ರಕರಣಗಳು ದಾಖಲಾಗಿವೆ. ವಾಹನಗಳನ್ನು ಕಳವು ಮಾಡುವ ಉದ್ದೇಶಕ್ಕಾಗಿಯೇ ಹೊರ ರಾಜ್ಯಗಳಿಂದ ದುಷ್ಕರ್ಮಿಗಳು ನಗರಕ್ಕೆ ಬರುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Write A Comment