ಕರ್ನಾಟಕ

ಬೆಂಗಳೂರು ಸ್ಫೋಟ: ಆಂಧ್ರಜ್ಯೋತಿ ದಿನಪತ್ರಿಕೆಯ ಚೂರು ಪತ್ತೆ

Pinterest LinkedIn Tumblr

andra

ಬೆಂಗಳೂರು: ‘ಬಾಂಬ್‌ ಸ್ಫೋಟಗೊಂಡಿರುವ ಸ್ಥಳ­ದಲ್ಲಿ ಆಂಧ್ರಜ್ಯೋತಿ ದಿನಪತ್ರಿಕೆಯ ಹೈದರಾಬಾದ್‌ ಆವೃತ್ತಿಯ ಚೂರುಗಳು ಪತ್ತೆಯಾಗಿವೆ. ಆ ಸುಳಿವು ಆಧರಿಸಿ ಸಿಬ್ಬಂದಿಯನ್ನು ಹೈದರಾಬಾದ್ ಹಾಗೂ ವಾರಂಗಲ್‌ಗೆ ಕಳುಹಿಸಲಾಗಿದೆ’ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಮಿಳುನಾಡಿನ ಚೆನ್ನೈ, ರಾಜ್ಯದ ತುಮಕೂರು, ರಾಮನಗರ, ಚನ್ನಪಟ್ಟಣ, ಹೊಸಕೋಟೆ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲೂ ಸಿಬ್ಬಂದಿ ತನಿಖೆ ಮಾಡುತ್ತಿದ್ದಾರೆ. ಚರ್ಚ್‌ ಸ್ಟ್ರೀಟ್‌ನಲ್ಲಿನ ಅಂಗಡಿ ಮುಂಗಟ್ಟುಗಳ ಮಾಲೀಕರು ಹಾಗೂ ಕೆಲಸಗಾರರ ವಿಚಾರಣೆ ನಡೆಸಲಾಗುತ್ತಿದೆ. ಘಟನೆಗೂ ಮುನ್ನ ನಗರದ ವಿವಿಧೆಡೆ ವಸತಿಗೃಹ­ಗಳಲ್ಲಿ ತಂಗಿದ್ದ ಗ್ರಾಹಕರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆಯಲ್ಲಿ ಮೃತಪಟ್ಟ ಭವಾನಿ (38) ಅವರ ಮರಣೋತ್ತರ ಪರೀಕ್ಷೆ­ಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾಯಿತು. ಬಳಿಕ ಕುಟುಂಬ ಸದಸ್ಯರು ಅವರ ಶವವನ್ನು ಚೆನ್ನೈಗೆ ತೆಗೆದುಕೊಂಡು ಹೋಗಿದ್ದಾರೆ.

ಸಂಚಾರ ನಿರ್ಬಂಧ: ಘಟನಾ ಸ್ಥಳದಿಂದ ಸುಮಾರು 200 ಮೀಟರ್‌ ವ್ಯಾಪ್ತಿಯಲ್ಲಿ ರಸ್ತೆಯ ಎರಡೂ ಕಡೆ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನ ಸಂಚಾರ ಮತ್ತು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆ ಭಾಗದ ಅಂಗಡಿ ಮುಂಗಟ್ಟುಗಳ ವಹಿವಾಟು ಸ್ಥಗಿತಗೊಂಡಿದೆ.

ವದಂತಿಗೆ ಕಿವಿಗೊಡಬೇಡಿ
‘ಘಟನೆ ನಂತರ ನಗರದೆಲ್ಲೆಡೆ ಕಟ್ಟೆಚ್ಚರ ವಹಿಸ ಲಾಗಿದೆ. ಸಾರ್ವ­ಜನಿಕರು ಯಾವುದೇ ವದಂತಿಗೆ ಕಿವಿಗೊ­ಡ­ಬಾರದು. ಸಂಶಯಾಸ್ಪದ ವಸ್ತು ಅಥವಾ ವ್ಯಕ್ತಿಗಳನ್ನು ಕಂಡರೆ ಹತ್ತಿರದ ಪೊಲೀಸ್‌ ಠಾಣೆ ಹಾಗೂ ಪೊಲೀಸ್‌ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು’.
–ಎಂ.ಎನ್‌.ರೆಡ್ಡಿ, ನಗರ ಪೊಲೀಸ್‌ ಕಮಿಷನರ್‌

Write A Comment