ಕರ್ನಾಟಕ

ಗುಂಡು ಹಾರಿಸಿಕೊಂಡು ಕಾರು ಚಾಲಕ ಆತ್ಮಹತ್ಯೆ

Pinterest LinkedIn Tumblr

pvec28news vasudev suicide

ಬೆಂಗಳೂರು: ನಾಗಶೆಟ್ಟಿಹಳ್ಳಿ ಸಮೀಪದ ಬಸವೇಶ್ವರ­ಲೇಔಟ್‌ನಲ್ಲಿ ವಾಸುದೇವ್ (46) ಎಂಬುವರು ಶನಿವಾರ ರಾತ್ರಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಮಿಳುನಾಡು ಮೂಲದ ವಾಸುದೇವ್, ಡಾಲರ್ಸ್ ಕಾಲೊನಿಯ ಉದ್ಯಮಿಯೊಬ್ಬರ ಬಳಿ ಕಾರು ಚಾಲಕರಾಗಿದ್ದರು. ಅವರು ಪತ್ನಿ ಇಂದ್ರಾಣಿ ಹಾಗೂ ಕಿರಿಯ ಮಗಳು ಶಿಲ್ಪಾ ಜತೆ ಬಸವೇಶ್ವರ­ಲೇಔಟ್‌ನಲ್ಲಿ ನೆಲೆಸಿದ್ದರು. ಆರು ತಿಂಗಳ ಹಿಂದಷ್ಟೆ ಹಿರಿಯ ಮಗಳು ಶ್ವೇತಾಳ ಮದುವೆಯಾಗಿತ್ತು.

ಶನಿವಾರ ಬೆಳಿಗ್ಗೆ ಕೆಲಸಕ್ಕೆ ಹೋಗದ ವಾಸುದೇವ್, ಮನೆಯಲ್ಲೇ ಕುಡಿಯುತ್ತಾ ಕುಳಿತಿದ್ದರು. ಈ ಬಗ್ಗೆ ಪ್ರಶ್ನಿಸಿದ ಶಿಲ್ಪಾಳಿಗೆ ಮನ­ಬಂದಂತೆ ಥಳಿಸಿದ್ದ ವಾಸು­ದೇವ್, ನಂತರ ಸ್ಥಳೀಯರ ಜತೆಯೂ ಗಲಾಟೆ ಮಾಡಿ­ದ್ದರು. ಪತಿಯ ಈ ವರ್ತನೆಯಿಂದ ಬೇಸರ­ಗೊಂಡ ಇಂದ್ರಾಣಿ ಅವರು ಸಂಜಯನಗರ ಪೊಲೀಸ­ರಿಗೆ ವಿಷಯ ತಿಳಿಸಿದ್ದರು.

ಹೀಗಾಗಿ ವಾಸುದೇವ್ ಅವರನ್ನು ಠಾಣೆಗೆ ಕರೆಸಿ­ಕೊಂಡ ಪೊಲೀಸರು, ಬುದ್ದಿ ಹೇಳಿ ಕಳುಹಿಸಿದ್ದರು. ರಾತ್ರಿ 8.30ರ ಸುಮಾರಿಗೆ ಪುನಃ ಜಗಳ ಆರಂಭಿಸಿದ ಅವರು, ಪತ್ನಿ–ಮಗಳನ್ನು ಕೋಣೆಯಲ್ಲಿ ಕೂಡಿ ಹಾಕಿ ದೇಶಿ ಪಿಸ್ತೂಲಿನಿಂದ ತಲೆಗೆ ಗುಂಡು ಹಾರಿಸಿಕೊಂಡಿ­ದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಸ್ಥಳೀಯರು ಮನೆಗೆ ಬಂದಿದ್ದಾರೆ. ಆದರೆ, ಈ ವೇಳೆಗಾಗಲೇ ವಾಸು­ದೇವ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ವಾಸುದೇವ್‌ ಅವರು ಕುಡಿದ ಮತ್ತಿನಲ್ಲಿ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಂತರ ತಲೆಗೆ ಹೊಡೆದು­ಕೊಂಡಿ­ದ್ದಾರೆ ಎಂದು ಪೊಲೀಸರು ತಿಳಿಸಿದರು.

‘ವಾಸುದೇವ್ ಅವರಿಗೆ ಪಿಸ್ತೂಲು ಎಲ್ಲಿಂದ ಸಿಕ್ಕಿತು ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಟಿ.ಆರ್.ಸುರೇಶ್ ಹೇಳಿದರು.

Write A Comment