ಕರ್ನಾಟಕ

ಭ್ರಷ್ಟ ಅಧಿಕಾರಿಗಳಿಗೆ ಚಳಿ ಬಿಡಿಸಿದ ಲೋಕಾಯುಕ್ತ; ರಾಜ್ಯದ 9ಕಡೆ ದಾಳಿ: ಅಪಾರ ಪ್ರಮಾಣದ ಸಂಪತ್ತು ವಶ

Pinterest LinkedIn Tumblr

Lokayukta_Kranataka_DC_0_0_0

ಬೆಂಗಳೂರು, ಡಿ.20: ಶೂನ್ಯಮಾಸದ ಕೊರೆಯುವ ಚಳಿಯಲ್ಲಿ ಬೆಚ್ಚಗೆ ನಿದ್ರಿಸುತ್ತಿದ್ದ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿರುವ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 9ಕಡೆ ದಾಳಿ ಮಾಡಿ ಅಪಾರ ಪ್ರಮಾಣದ ಸಂಪತ್ತನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು: ಕೊಪ್ಪಳದ ಆರ್‌ಟಿಓ ಪಾಂಡುರಂಗ ಶೆಟ್ಟಿ ಅವರ ಬೆಂಗಳೂರಿನ ಬಾನಸವಾಡಿಯಲ್ಲಿರುವ ನಿವಾಸದ ಮೇಲೆ ಲೋಕಾಯುಕ್ತ ಎಸ್‌ಪಿ ಅಶ್ವಿನಿ ಅವರ ತಂಡ ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿತು.

ಮೈಸೂರು: ಶ್ರೀರಂಗಪಟ್ಟಣದ ರೆವಿನ್ಯೂ ಇನ್ಸ್‌ಪೆಕ್ಟರ್ ದೊಡ್ಡಯ್ಯ ಅವರು ವಾಸವಿದ್ದ ಮೈಸೂರಿನ ಬೋಗಾದಿ ಬಡಾವಣೆಯಲ್ಲಿನ ನಿವಾಸದ ಮೇಲೆ ಮಂಡ್ಯದ ಲೋಕಾಯುಕ್ತ ಎಸ್‌ಪಿ ನಾರಾಯಣಸ್ವಾಮಿ ಅವರ ನೇತೃತ್ವದ ತಂಡ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಹಾಸನ: ಹಾಸನದ ವಿದ್ಯಾನಗರದಲ್ಲಿರುವ ಆಹಾರ ನಿರೀಕ್ಷಕ ದೊರೆಸ್ವಾಮಿ ಅವರ ನಿವಾಸದ ಮೇಲೆ ಲೋಕಾಯುಕ್ತ ಎಸ್‌ಪಿ ವೇದಮೂರ್ತಿ ನೇತೃತ್ವದ ತಂಡ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಬೀದರ್: ಅದೇ ರೀತಿ ಬೀದರ್‌ನ ಎಸ್‌ಪಿ ಆಪ್ತ ಕಾರ್ಯದರ್ಶಿ ಅಶೋಕ್ ಪಾಟೀಲ್ ಅವರ ಎಲ್‌ಐಸಿ ಕಾಲೋನಿ, ಶಿವನಗರ, ಬಸವ ಕಲ್ಯಾಣ ತಾಲ್ಲೂಕಿನ ಕಂಡಾಳ ಗ್ರಾಮ, ಬಾಲ್ಕಿ ತಾಲ್ಲೂಕಿನ ಸಿದ್ದೇಶ್ವರ ತೋಟದ ಮನೆ ಹಾಗೂ ಆಂಧ್ರದ ಜಿಣಗಿಪಲ್ಲಿಯ ನಿವಾಸಗಳ ಮೇಲೆ ಲೋಕಾಯುಕ್ತ ಎಸ್‌ಪಿ ಎಂ.ಬಿ.ಪಾಟೀಲ್ ನೇತೃತ್ವದ ತಂಡ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ನಡೆಸಿ ಲೆಕ್ಕ ಪತ್ರಗಳು ಸೇರಿದಂತೆ ಮತ್ತಿತರ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮೈಸೂರ್ ಪೇಪರ್ ಮಿಲ್‌ನ ಅಸಿಸ್ಟೆಂಟ್ ಜನರಲ್ ಮೇನೆಜರ್ ಜಿ.ವಿ.ನಂಜಯ್ಯ ಅವರ ನಿವಾಸದ ಮೇಲೆ ಎಸ್‌ಪಿ ರುದ್ರೇಶ್ ನೇತೃತ್ವದ ತಂಡ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದೆ.

Write A Comment