ಕರ್ನಾಟಕ

ಕರ್ಣಾಟಕ ಬ್ಯಾಂಕ್‌ ವ್ಯವಸ್ಥಾಪಕ ಆತ್ಮಹತ್ಯೆ

Pinterest LinkedIn Tumblr

krishna

ಬಳ್ಳಾರಿ: ನಗರದ ಮೀನಾಕ್ಷಿ ವೃತ್ತ­ದಲ್ಲಿ­ರುವ ಕರ್ಣಾ­ಟಕ ಬ್ಯಾಂಕ್‌ ಹಿರಿಯ ವ್ಯವ­ಸ್ಥಾ­ಪಕ ಎ.­ಕೃಷ್ಣ­ಮೂರ್ತಿ (51) ಶುಕ್ರ­­ವಾರ ಬೆಳಿಗ್ಗೆ ಬ್ಯಾಂಕಿ­­ನಲ್ಲೇ ಆತ್ಮಹತ್ಯೆ ಮಾಡಿ­ಕೊಂಡಿ­ದ್ದಾರೆ.

ಬೆಳಿಗ್ಗೆ 8.30ಕ್ಕೆ ಕಚೇರಿಗೆ ಬಂದಿದ್ದ ಅವರು, ಒಳಗಿರುವ ಕೊಠಡಿಯೊಂದರ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂಲತಃ ಬಳ್ಳಾರಿಯವರೇ ಆದ ಕೃಷ್ಣಮೂರ್ತಿ ಮೂರು ವರ್ಷಗಳ ಹಿಂದೆ ಹಿರಿಯ ವ್ಯವಸ್ಥಾಪಕರಾಗಿ ಇಲ್ಲಿಗೆ ವರ್ಗಾವಣೆಗೊಂಡಿದ್ದರು.

‘ಸಾಲ ಮರುಪಾವತಿ ಗುರಿ ಸಾಧಿಸದಿ­ರುವ ಕಾರಣ ಉಂಟಾದ ಉದ್ವೇಗ ಹಾಗೂ ಖಿನ್ನತೆ ನನ್ನ ಸಾವಿಗೆ ಕಾರಣ. ನನ್ನ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸದೆ ಕುಟುಂಬ ಸದಸ್ಯರಿಗೆ ಒಪ್ಪಿ­ಸ­ಬೇಕು’ ಎಂದು ಅವರು ಆತ್ಮ­ಹತ್ಯೆಗೆ ಮುನ್ನ ಬರೆದಿರುವ ಪತ್ರದಲ್ಲಿ ತಿಳಿಸಿ­ದ್ದಾರೆ. ಕೃಷ್ಣಮೂರ್ತಿ ಅವರು ಗಣಿಗಾರಿಕೆಗೆ ಸಂಬಂ­ಧಿಸಿದ ಕೆಲವು ವ್ಯಕ್ತಿಗಳಿಗೆ ತಾತ್ಕಾ­ಲಿಕ ಓವರ್‌ ಡ್ರಾಫ್ಟ್‌ ಮಂಜೂರು ಮಾಡಿದ್ದು, ಸಮಯಕ್ಕೆ ಸರಿಯಾಗಿ ಅದು ಮರುಪಾವತಿಯಾಗದ ಕಾರಣ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಅಲ್ಲದೆ, ಸಾಲ ಪಡೆದು, ಪಾವತಿ ಮಾಡದ ಕೆಲವರ ಹೆಸರನ್ನೂ ಅವರು ಪತ್ರದಲ್ಲಿ ನಮೂದಿಸಿದ್ದು, ಒತ್ತಡಕ್ಕೆ ಒಳಗಾಗಿ ಸಾವಿಗೆ ಶರಣಾಗುತ್ತಿರು­ವು­ದಾಗಿ ಹೇಳಿದ್ದಾರೆ.

Write A Comment