ಕರ್ನಾಟಕ

ಬಡ ಕುಟುಂಬದ ವಿದ್ಯಾರ್ಥಿನಿಯರಿಗೆ ರ್‍ಯಾಂಕ್‌; ದಾವಣಗೆರೆ ವಿ.ವಿ.ಯ ಹೊನ್ನಾಳಿ ಸರ್ಕಾರಿ ಕಾಲೇಜಿನ ಸಾಧನೆ

Pinterest LinkedIn Tumblr

Rank

ಹೊನ್ನಾಳಿ: ದಾವಣಗೆರೆ ವಿಶ್ವವಿದ್ಯಾಲಯದ ಕಲಾ ವಿಭಾಗ­ದಲ್ಲಿ ಹೊನ್ನಾಳಿ ಸರ್ಕಾರಿ ಪದವಿ ಕಾಲೇಜು ಪ್ರಥಮ, ದ್ವಿತೀಯ ಹಾಗೂ ಎಂಟನೇ ರ್‍ಯಾಂಕ್‌ಗಳನ್ನು  ಪಡೆದಿದೆ. ಆ ಮೂಲಕ ಅಪರೂಪದ ಸಾಧನೆಯಿಂದ ಗಮನ ಸೆಳೆದಿದೆ.

ಕೆ.ಎಸ್. ಪ್ರಿಯಾಂಕಾ, ಶೇ 91.08 ಅಂಕದೊಂದಿಗೆ ಪ್ರಥಮ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಡಿ.ಆರ್.­ಪ್ರತಿಮಾ  ಶೇ 90.17 ಅಂಕಗಳನ್ನು ಪಡೆ­ಯುವ ಮೂಲಕ ಎರಡನೇ ರ್‍ಯಾಂಕ್ ಹಾಗೂ ನಳಿನಿ ಹೊಸಮನಿ ಶೇ 87.50 ಅಂಕಗಳನ್ನು ಪಡೆದುಎಂಟನೇ ರ್‍ಯಾಂಕ್  ಪಡೆದಿದ್ದಾರೆ. ಪ್ರಥಮ, ದ್ವಿತೀಯ ಹಾಗೂ ಎಂಟನೇ ರ್‍ಯಾಂಕ್ ಪಡೆದಿರುವ ಈ ಮೂವರು ವಿದ್ಯಾರ್ಥಿನಿ­ಯರು ಕಡು ಬಡತನದ ಕುಟುಂಬದಿಂದ ಬಂದವರು.

ಕೆ.ಎಸ್.ಪ್ರಿಯಾಂಕಾ: ತಾಲ್ಲೂಕಿನ ಚಿಕ್ಕಬಾಸೂರು ತಾಂಡಾದ ವಿದ್ಯಾರ್ಥಿನಿ ಪ್ರಿಯಾಂಕಾ, ಏಳು ವರ್ಷಗಳ ಹಿಂದೆ ತಾಯಿ ತೀರಿಕೊಂಡ ನಂತರ ತಂದೆ ಶಂಕರನಾಯ್ಕ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಂ­ಡರು. ಮುಂದೆ ಬಿಇಡಿ ಪಡೆದು ಶಿಕ್ಷಕಿಯಾಗಬೇಕೆಂಬ ಹಂಬಲ­ವಿದೆ ಎಂದು ಅವರುಇಂಗಿತ ತೋಡಿಕೊಂಡರು.

ಡಿ.ಆರ್.ಪ್ರತಿಮಾ: ಇಲ್ಲಿನ ಹಿರೇಕಲ್ಮಠದ ರುದ್ರಪ್ಪ– ಕೆಂಚಮ್ಮ ಅವರ ಮೂವರು ಹೆಣ್ಣು ಮಕ್ಕಳ ಪೈಕಿ ಪ್ರತಿಮಾ ಎರಡನೆಯವರು.
ಹಟ ಹಿಡಿದು ಶೇ 90.17 ರಷ್ಟು ಅಂಕ ಗಳಿಸಿದ ಈಕೆಗೆ ಬಿಇಡಿ ನಂತರ ಎಂ.ಎ. ಮಾಡುವ ಬಯಕೆ. ಸಹಕಾರ ಸಿಕ್ಕರೆ ಕೆ.ಎ.ಎಸ್. ಸಹ ಮಾಡುವಾಸೆಯಿದೆ.

ನಳಿನಿ ಹೊಸಮನಿ: ನಳಿನಿಯೂ ಬಡ ವಿದ್ಯಾರ್ಥಿನಿ. ತಂದೆ ತಾಯಿ ಇಬ್ಬರೂ  ಹೊನ್ನಾಳಿಯಲ್ಲಿ ಸಣ್ಣ ಹೋಟೆಲ್ ನಡೆಸುತ್ತಿದ್ದಾರೆ.
ತಾನು ಬಿಇಡಿ  ಓದಿ, ತಮ್ಮ ಹಾಗೂ ತಂಗಿ­ಯನ್ನು ಓದಿಸುವ ಇರಾದೆ ಅವರದು.

7 ವರ್ಷಗಳಲ್ಲೇ ಉತ್ತಮ ಸಾಧನೆ
ಹೊನ್ನಾಳಿಗೆ  ಕೇವಲ ಏಳು ವರ್ಷಗಳ ಹಿಂದೆ ಮಂಜೂರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ  ಅತ್ಯಲ್ಪ ಅವಧಿಯಲ್ಲಿ ಮೂರು ರ್‍ಯಾಂಕ್‌ ಸಿಕ್ಕಿರು­ವುದು ಬೋಧನೆ ಹಾಗೂ ಉತ್ತಮ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. 2007–8ರಲ್ಲಿ 127 ವಿದ್ಯಾರ್ಥಿ­ಗಳಿಂದ ಆರಂಭವಾದ ಈ ಕಾಲೇಜು ಇದೀಗ ಸಾವಿರ ವಿದ್ಯಾರ್ಥಿಗಳನ್ನು ಹೊಂದಿದೆ.

Write A Comment