ಕರ್ನಾಟಕ

ಐ ಎಸ್ ಐ ಎಸ್ ಪರ ಟ್ವೀಟ್: ಮೆಹ್ದಿಯ ಟ್ವಿಟರ್ ಹಿಂಬಾಲಕರಲ್ಲಿ ಶೇ.60% ಮುಸ್ಲಿಮೇತರರು

Pinterest LinkedIn Tumblr

mehadi

ನವದೆಹಲಿ: ಐ ಎಸ್ ಐ ಎಸ್ ಪರ ಟ್ವೀಟ್ ಖಾತೆ ಹೊಂದಿದ್ದ ಹಾಗು ಬೆಂಗಳೂರಿನಲ್ಲಿ ಬಂಧಿತನಾಗಿರುವ ಮೆಹ್ದಿ ಮಸ್ರೂರ್ ಬಿಸ್ವಾಸ್ ನ ಟ್ವಿಟರ್ ಖಾತೆಯನ್ನು ಅನುಸರಿಸುತ್ತಿದ್ದವರಲ್ಲಿ ಶೇಕಡಾ 60% ಕ್ಕೂ ಹೆಚ್ಚು ಜನ ಮುಸ್ಲಿಮೇತರರು ಮತ್ತು ಅವರುಗಳಲ್ಲಿ ಹೆಚ್ಚಿನವರು ಪಶ್ಚಿಮ ದೇಶದ ಜನರು ಅದರಲ್ಲೂ ಯು ಕೆ ಯವರು ಎಂದು ಕೆಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೋಮವಾರ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಹೇಳಿಕೆ ಕೊಟ್ಟ ಗೃಹ ಮಂತ್ರಿ, ಡಿಸೆಂಬರ್ 13 ರಂದು ಬಂಧಿತನಾಗಿರುವ 24 ವರ್ಷದ ಮೆಹ್ದಿ, ತನಿಖೆಯ ಸಮಯದಲ್ಲಿ ತನ್ನ ಟ್ವಿಟರ್ ಖಾತೆಯಲ್ಲಿ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಐ ಎಸ್ ಐ ಎಸ್ ಪರ ಟ್ವೀಟ್ ಗಳನ್ನು ಹಂಚಿಕೊಳ್ಳುತ್ತಿದ್ದನ್ನು ಒಪ್ಪಿಕೊಂಡಿದ್ದು, ಐ ಎಸ್ ಐ ಎಸ್ ಗೆ ಸೇರಿಕೊಂಡಿರುವುದನ್ನು ನಿರಾಕರಿಸಿದ್ದಾನೆ ಎಂದು ತಿಳಿಸಿದ್ದಾರೆ.

ತನಿಖೆಯ ವೇಳೆಯಲ್ಲಿ, ತನ್ನ ಟ್ವಿಟರ್ ಖಾತೆಯನ್ನು ಅನುಸರಿಸುತ್ತಿದ್ದವರಲ್ಲಿ ಶೇಕಡಾ 60% ಗೂ ಹೆಚ್ಚು ಜನ ಮುಸ್ಲಿಮೇತರರು ಮತ್ತು ಅವರುಗಳಲ್ಲಿ ಹೆಚ್ಚಿನ ಜನರು ಪಶ್ಚಿಮ ದೇಶಗಳಿಂದ ಅದರಲ್ಲೂ ಯು ಕೆ ಯವರು ಎಂದು ಮೆಹದಿ ತಿಳಿಸಿದ್ದಾನೆ.

ಬಂಧನದ ನಂತರ ಕೆಂದ್ರ ತನಿಖಾ ದಳಗಳು ಕರ್ನಾಟಕ ಪೋಲೀಸರ ಜೊತೆ ಜಂಟಿಯಾಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

ಮೆಹ್ದಿಯ ಟ್ವಿಟರ್ ಖಾತೆಗೆ 17000 ಹಿಂಬಾಲಕರಿದ್ದರು ಎಂದು ತಿಳಿದು ಬಂದಿದ್ದು, ಅವರ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯ ಜಾರಿಯಲ್ಲಿದೆ ಎನ್ನಲಾಗಿದೆ.

Write A Comment