ಕರ್ನಾಟಕ

ರಾಜ್ ಕುಮಾರ್ ಬಳಿ ಕಷ್ಟಪಟ್ಟು ಆಟೋಗ್ರಾಫ್ ಪಡೆದಿದ್ದೆ : ರಜನಿಕಾಂತ್

Pinterest LinkedIn Tumblr

rajani

ಬೆಂಗಳೂರು: ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ವರನಟ ದಿವಂಗತ ಡಾ. ರಾಜ್ ಕುಮಾರ್ ಅವರ ಬಳಿ ಕಷ್ಟಪಟ್ಟು ಆಟೋಗ್ರಾಫ್‌ವೊಂದನ್ನು ಪಡೆದೆ, ಆನಂತರ ನನ್ನ ಜೀವಮಾನದಲ್ಲಿ ಯಾರ ಬಳಿಯು ಆಟೋಗ್ರಾಫ್ ಪಡೆದಿಲ್ಲ ಎಂದು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ.

ವರನಟ ಡಾ. ರಾಜ್ ಕುಮಾರ್ ಅವರ ಸ್ಮಾರಕವನ್ನು ಲೋಕಾರ್ಪಣೆ ಬಳಿಕ ಮಾತನಾಡಿದ ರಜನಿಕಾಂತ್ ಅವರು ರಾಜ್‌ಕುಮಾರ ಗುಣಗಾನ ಮಾಡಿದರು. 1954ರಲ್ಲಿ ಬೇಡರಕಣ್ಣಪ್ಪ ಚಿತ್ರದ ಮೂಲಕ ರಾಜ್‌ಕುಮಾರ್ ಅವರ ತಮ್ಮ ಚಿತ್ರ ಬದುಕಿನ ನಾಗಲೋಟ ಶುರು ಮಾಡಿದರು. ಅಂದು ಶುರುವಾದ ಅಶ್ವಮೇಧಯಾಗ ನಿರಂತರವಾಗಿ ಪ್ರಜ್ವಲಿಸಿತು. ರಾಜ್ ಕುಮಾರ್ ಕಾಲಿಟ್ಟ ಕಡೆಗಳಲ್ಲ ಜಯದ ಮಾಲೆ ಧರಿಸಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿ ವಿರಾಜಿಸಿದರು.

ಅವರ ಬದುಕು ಎಲ್ಲರಿಗೂ ಆದರ್ಶಪ್ರಾಯ. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಬದುಕಿದ ಧೀಮಾಂತ ವ್ಯಕ್ತಿ. ಅವರಿಗೆ ಎಲ್ಲರು ನಮಸ್ಕರಿಸುತ್ತಾರೆ ಆದರೆ ಆ ಗೌರವಕ್ಕೆ ಮಾತ್ರ ರಾಜ್ ಕುಮಾರ್ ಎಂದಿಗೂ ಪಾತ್ರರಾಗಿಲ್ಲ. ಆ ಗೌರವವನ್ನು ತಮ್ಮಲ್ಲಿ ನೆಲೆಸಿರುವ ತಾಯಿ ಸರಸ್ವತಿಗೆ ಅರ್ಪಿಸಿದ ಮಹಾನ್ ನಟ ರಾಜ್ ಕುಮಾರ್ ಎಂದು ರಜನಿಕಾಂತ್ ಬರ್ಣ್ಣಿಸಿದರು.

Write A Comment