ಕರ್ನಾಟಕ

ನಿವೇಶನ ವಿವಾದ: ಬಂಗಾರಪೇಟೆ: ಚರ್ಚ್‌ನಲ್ಲಿ ಘರ್ಷಣೆ

Pinterest LinkedIn Tumblr

vivada

ಬಂಗಾರಪೇಟೆ, ನ. 23: ಖಾಲಿ ನಿವೇಶನಕ್ಕೆ ಸಂಬಂಧಪಟ್ಟಂತೆ ಇಲ್ಲಿನ ಗಂಗಮ್ಮನಪಾಳ್ಯದ ಚರ್ಚ್‌ನಲ್ಲಿ ಘರ್ಷಣೆ ನಡೆದ ಬಗ್ಗೆ ವರದಿ ಯಾಗಿದೆ.
ಪಟ್ಟಣದ ಗಂಗಮ್ಮನಪಾಳ್ಯದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಯ ಹಿಂಭಾಗದಲ್ಲಿ ಒಂದು ವಿಶಾಲ         ಾದ ಖಾಲಿ ನಿವೇಶನವಿದ್ದು, ಇಲ್ಲಿ ಕಲ್ವಾರಿ ಅಪಲೋಸ್ತಿಕ್ ಚರ್ಚ್‌ನ್ನು ನಿರ್ಮಾಣ ಮಾಡಿ ಚರ್ಚ್‌ನ ಪಾಸ್ಟರ್ ರಾಬರ್ಟ್ ಸೋಲೋ ಮನ್ ಡಿಸೋಜ ಎಂಬವರು ನೇತೃತ್ವದೊಂದಿಗೆ ಪ್ರಾರ್ಥನೆ ನಡೆಯುತ್ತಿತ್ತು. ಇಂದು ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭದಲ್ಲಿ ನಿವೇಶನಕ್ಕೆ ಸಂಬಂಧ ಪಟ್ಟಂತೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ ಎನ್ನಲಾಗಿದೆ.
ಈ ವೇಳೆ ಚರ್ಚ್‌ನ ಪರವಿದ್ದ ಕೆಲವರು, ಚರ್ಚ್ ಒಳಗೆ ಹೋಗಿ ಪೀಠೋಪಕರಣಗಳನ್ನು ಚೆಲ್ಲಾಪಿ ಲ್ಲಿಯಾಗಿ ಮಾಡಿ, ಚರ್ಚ್ ಮೇಲೆ ದಾಳಿ ನಡೆಸಲಾಗಿದೆ ಎಂದು ದೂರು ನೀಡುವುದಾಗಿ ಇನ್ನೊಂದು ಗುಂಪಿನ ಮೇಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ, ಪೀಠೋಪ ಕರಣಗಳಿಗೆ ಹಾನಿ ಮಾಡುತ್ತಿದ್ದವರು ಪರಾರಿಯಾಗಿ ದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಜಿ.ಎನ್.ವೆಂಕಟಾಚಲಪತಿ, ಸಬ್ ಇನ್ಸ್‌ಪೆಕ್ಟರ್ ಸಿ.ರವಿಕುಮಾರ್, ಕಾಮಸಮುದ್ರ ಎಸ್ಸೈ ವಸಂತ್ ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ.

http://vbnewsonline.com

Write A Comment