ಕರ್ನಾಟಕ

ಕನ್ನಡದಲ್ಲಿ ಪರಭಾಷಾ ಚಿತ್ರಗಳ ಡಬ್ಬಿಂಗ್‌ಗೆ ಗ್ರೀನ್ ಸಿಗ್ನಲ್

Pinterest LinkedIn Tumblr

high court1

ಬೆಂಗಳೂರು: ಪರಭಾಷಾ ಚಿತ್ರಗಳ ಡಬ್ಬಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಾಣಿಜ್ಯ ಮಂಡಳಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಗುರುವಾರ ವಜಾ ಮಾಡಿದೆ.

ಪರಭಾಷಾ ಚಿತ್ರಗಳು ಮತ್ತು ಧಾರಾವಾಹಿಗಳ ಡಬ್ಬಿಂಗ್‌ಗೆ ವಾಣಿಜ್ಯ ಮಂಡಳಿ ಅವಕಾಶ ನೀಡುತ್ತಿಲ್ಲ ಎಂದು ಕರ್ನಾಟಕ ಗ್ರಾಹಕರ ಕೂಟ ಸ್ಪರ್ಧಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಇದನ್ನು ಪ್ರಶ್ನಿಸಿ ವಾಣಿಜ್ಯ ಮಂಡಳಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾ ಮಾಡಿದ್ದು, ವಾಣಿಜ್ಯ ಮಂಡಳಿಗೆ ತೀವ್ರ ಹಿನ್ನಡೆಯಾಗಿದೆ.

ಮಹಾಭಾರತ, ರಾಮಾಯಣ, ಲವಕುಶ ಮುಂತಾದ ಧಾರವಾಹಿಗಳ ಡಬ್ಬಿಂಗ್‌ಗೆ ಅವಕಾಶ ನೀಡುತ್ತಿಲ್ಲ ಎಂದು ಗ್ರಾಹಕರ ಕೂಟ ದೂರನ್ನು ನೀಡಿತ್ತು. ಈ ಕುರಿತು ತನಿಖೆ ನಡೆಸುವಂತೆ ಸ್ಪರ್ಧಾ ಆಯೋಗ ಡಿಜಿಐಗೆ ಸೂಚಿಸಿತ್ತು. ತನಿಖಾ ಆದೇಶ ಪ್ರಶ್ನಿಸಿ ವಾಣಿಜ್ಯ ಮಂಡಳಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು.

ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿರುವುದರಿಂದ ವಾಣಿಜ್ಯ ಮಂಡಳಿ ಸ್ಪರ್ಧಾ ಆಯೋಗದ ತೀರ್ಪಿಗೆ ಬದ್ಧವಾಗಿರಬೇಕಾಗುತ್ತದೆ. ಸ್ಪರ್ಧಾ ಆಯೋಗಕ್ಕೆ ತಮ್ಮ ಆಕ್ಷೇಪ ಸಲ್ಲಿಸಬಹುದು ಎಂದು ಹೈಕೋರ್ಟ್ ವಾಣಿಜ್ಯ ಮಂಡಳಿಗೆ ತಿಳಿಸಿದೆ. ಕರ್ನಾಟಕದಲ್ಲಿ ಡಬ್ಬಿಂಗ್‌ಗೆ ಅವಕಾಶವಿಲ್ಲ. ಡಬ್ಬಿಂಗ್ ಇದ್ದ ನಿರ್ಬಂಧ ಕೋರ್ಟ್ ತೆಗೆದುಹಾಕಿದ್ದು, ಮುಂದಿನ ಕಾನೂನು ಕ್ರಮದ ಬಗ್ಗೆ ಯೋಚಿಸಬೇಕಿದೆ.

Write A Comment