ಕರ್ನಾಟಕ

ಮಳೆ ನೀರಿನ ಗುಂಡಿಗೆ ಬಿದ್ದು ಬಾಲಕನ ಮೃತ್ಯು

Pinterest LinkedIn Tumblr

yashwanth1

ಬೆಂಗಳೂರು, ಅ. 8: ಮಳೆ ನೀರಿನಲ್ಲಿ ಬಾಲಕಿ ಕೊಚ್ಚಿ ಹೋದ ಪ್ರಕರಣದ ಬೆನ್ನಲ್ಲೆ ಮಳೆ ನೀರು ನಿಂತಿದ್ದ ಪಾಯದ ಗುಂಡಿಗೆ ಬಿದ್ದು ಬಾಲಕ ನೊಬ್ಬ ಸಾವನ್ನಪ್ಪಿದ ಘಟನೆ ನಗರದ ಸಿಟಿ ಸಿವಿಲ್ ಕೋರ್ಟ್ ಸಮೀಪದ ಸರಕಾರಿ ಕಲಾ ಕಾಲೇಜು ಆವರಣದಲ್ಲಿ ಬುಧವಾರ ಮಧ್ಯಾಹ್ನ ಮಧ್ಯಾಹ್ನ 1:30ರ ಸುಮಾರಿಗೆ ಸಂಭವಿಸಿದೆ.

ಮೃತಪಟ್ಟ ಬಾಲಕನನ್ನು ನಟರಾಜ್ ಮತ್ತು ರೆಡ್ಡೆಮ್ಮ ದಂಪತಿಯ ಪುತ್ರ ಯಶವಂತ್ (11) ಎಂದು ಗುರುತಿಸಲಾಗಿದೆ. ಇಲ್ಲಿನ ಅವೆನ್ಯೂ ರಸ್ತೆಯ ನಿವಾಸಿ ಯಶವಂತ್ ಬುಧವಾರ ಮಧ್ಯಾಹ್ನ ಕ್ರಿಕೆಟ್ ಆಟವಾಡಲು ಸರಕಾರಿ ಕಲಾ ಕಾಲೇಜು ಮೈದಾ ನಕ್ಕೆ ತೆರಳಿದ್ದ ಎಂದು ಹೇಳಲಾಗಿದೆ.

ಕಾಲೇಜು ಆವರಣದಲ್ಲಿ ಎನ್‌ಸಿಸಿ ವಿಭಾಗಕ್ಕೆ ಕಟ್ಟಡ ನಿರ್ಮಾಣ ಮಾಡಲು ಪಾಯದ ಗುಂಡಿ ಅಗೆಯಲಾಗಿತ್ತು. ಆಟ ವಾಡುತ್ತಿದ್ದ ಬಾಲಕ ಗುಂಡಿಗೆ ಬಿದ್ದ ಚಂಡನ್ನು ತರಲು ತೆರಳಿದ್ದ ಸಂದರ್ಭದಲ್ಲಿ ಆಯತಪ್ಪಿ ಮಳೆ ನೀರಿನ ಗುಂಡಿಗೆ ಬಿದ್ದ ಸಾವನ್ನಪ್ಪಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೂಡಲೇ ಬಾಲಕನನ್ನು ರಕ್ಷಿ ಸಲು ಆತನ ಸ್ನೇಹಿತರು ಹಾಗೂ ಸಾರ್ವಜನಿಕರು ಪ್ರಯತ್ನಪಟ್ಟ ರಾದರೂ ಅದು ಪ್ರಯೋಜನ ವಾಗಲಿಲ್ಲ. ಮೃತದೇಹವನ್ನು ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರ ಣೋತ್ತರ ಪರೀಕ್ಷೆಗಾಗಿ ಇರಿಸ ಲಾಗಿದೆ. ಈ ಸಂಬಂಧ ಹಲಸೂರು ಗೇಟ್ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Write A Comment