ಕರಾವಳಿ

ಭೋಜರಾಜ್ ಎಂಬಿಬಿಎಸ್ ತುಳು ಚಲನಚಿತ್ರ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

Pinterest LinkedIn Tumblr

ಮಂಗಳೂರು : ದರ್ಬಾರ್ ಸಿನೆಮಾಸ್ ಬ್ಯಾನರಿನಲ್ಲಿ ಪ್ರಭಾ ನಾರಾಯಣ ಸುವರ್ಣ ಮುಂಬಯಿ ಅರ್ಪಿಸಿ ರಫೀಕ್ ದರ್ಬಾರ್ ನಿರ್ಮಾಣದ ಪರ್ವೇಜ್ ಬೆಳ್ಳಾರೆ, ಶರಣ್ ರಾಜ್ ಸುವರ್ಣ ಕಾಸರಗೋಡು ಸಹ ನಿರ್ಮಾಣದ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದಲ್ಲಿ ತಯಾರಾದ ಭೋಜರಾಜ್ ಎಂಬಿಬಿಎಸ್ ತುಳು ಚಲನ ಚಿತ್ರದ ಬಿಡುಗಡೆ ಸಮಾರಂಭವು ಭಾರತ್ ಮಾಲ್‌ನ ಬಿಗ್ ಸಿನಿಮಾಸ್‌ನಲ್ಲಿ ಜರಗಿತು.

ಸಮಾರಂಭವನ್ನು ಚಲನಚಿತ್ರ ನಿರ್ಮಾಪಕ ಟಿ.ಎ. ಶ್ರೀನಿವಾಸ್ ದೀಪ ಬೆಳಗಿಸಿ ಉದ್ಘಾಟಿಸಿದರು.
ತುಳು ಸಿನಿಮಾವನ್ನು ಪ್ರತೀಯೋರ್ವರು ವೀಕ್ಷಿಸುವ ಮೂಲಕ ತುಳು ಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗ ಬೇಕೆಂದರು.

ನಟ ಭೋಜರಾಜ ವಾಮಂಜೂರು ಮಾತನಾಡಿ ತುಳು ಚಿತ್ರರಂಗ ಐವತ್ತರ ಗಡಿಯನ್ನು ದಾಟಿ ಮುಂದುವರಿದಿದೆ. ತುಳುವಿನಲ್ಲಿ ತೆರೆಕಾಣುತ್ತಿರುವ ೧೨೨ ನೇ ಸಿನಿಮಾ ಭೋಜರಾಜ ವಾಮಂಜೂರು ಸಿನಿಮಾಕ್ಕೆ ಸರ್ವಧರ್ಮದ ಕಲಾಭಿಮಾನಿಗಳ ಪ್ರೋತ್ಸಾಹ ಬೇಕು ಎಂದರು.

ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಮಾತನಾಡಿ ಬಣ್ಣಬಣ್ಣದ ಬದುಕು ಮತ್ತು ಪಮ್ಮೆಣ್ಣೆ ದಿ ಗ್ರೇಟ್ ಸಿನಿಮಾವನ್ನು ನಿರ್ದೇಶಿಸಿದ್ದೇನೆ. ನನ್ನ ಮೂರನೇ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸಿ ಎಂದರು. ಸಮಾರಂಭದಲ್ಲಿ ರಂಗ ನಟ ವಿ.ಜಿ. ಪಾಲ್, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ರಫೀಕ್ ದರ್ಬಾರ್, ಪ್ರಭಾ ಸುವರ್ಣ, ನಾರಾಯಣ ಸುವರ್ಣ, ಸುಮಲತ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ಭೋಜರಾಜ ಎಂಬಿಬಿಎಸ್ ಚಿತ್ರದಲ್ಲಿ ನವರಸ ರಾಜೆ ಭೋಜರಾಜ ವಾಮಂಜೂರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ತಾರಾಗಣದಲ್ಲಿ ದೇವದಾಸ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್, ಬೈಲ್, ಅರವಿಂದ ಬೋಳಾರ್, ಉಮೇಶ್ ಮಿಜಾರ್, ಶೀತಲ್ ನಾಯಕ್, ನವ್ಯಾ ಪೂಜಾರಿ, ರವಿ ರಾಮಕುಂಜ,, ರೊನ್ಸ್ ಲಂಡನ್, ಪ್ರಾಣ್ ಶೆಟ್ಟಿ, ಪರ್ವೇಜ್ ಬೆಳ್ಳಾರೆ, ಡಾ. ಸತೀಶ್ ಕಲ್ಲಿಮಾರ್, ಸುಜಾತ ಶಕ್ತಿನಗರ, ಮಾ.ದನ್ವಿತ್ ಸುವರ್ಣ ಮೊದಲಾದವರಿದ್ದಾರೆ.

ಸಿನಿಮಾದಲ್ಲಿ ಮೂರು ಹಾಡುಗಳಿವೆ. ರಾಜೇಶ್ ಭಟ್ ಬೆದ್ರ, ಗುರು ಬಾಯಾರು, ರಾಕಿಸೋನು ರಾಗ ಸಂಯೋಜಿಸಿದ್ದಾರೆ. ಈ ಸಿನಿಮಾ ಸಂಪೂರ್ಣ ಹಾಸ್ಯ ಮನೋರಂಜನೆ ಹೊಂದಿದೆ ಎಂದು ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ತಿಳಿಸಿದರು.

ಭೋಜರಾಜ ಎಂಬಿಬಿಎಸ್ ಮಂಗಳೂರಿನಲ್ಲಿ ರೂಪವಾಣಿ, ಸಿನಿಪೊಲಿಸ್, ಪಿವಿಆರ್, ಬಿಗ್ ಸಿನಿಮಾಸ್, ಸುರತ್ಕಲ್ ನಲ್ಲಿ ನಟರಾಜ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಮೂಡಬಿದ್ರೆಯಲ್ಲಿ ಅಮರಶ್ರೀ, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್, ಕುಂದಾಪುರದಲ್ಲಿ ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾಸರಗೋಡಿನಲ್ಲಿ ಕೃಷ್ಣಾ, ಮುಳ್ಳೇರಿಯಾದಲ್ಲಿ ಕಾವೇರಿ ಚಿತ್ರಮಂದಿರದಲ್ಲಿ ಭೋಜರಾಜ್ ಎಂಬಿಬಿಎಸ್ ಸಿನಿಮಾ ತೆರೆಕಂಡಿದೆ.

Comments are closed.