ಕರಾವಳಿ

ಹಿಂದೂ ಜಾಗರಣ ವೇದಿಕೆ,‌ ಹಿಂದೂ ಯುವವಾಹಿನಿ ನೇತೃತ್ವ ಬೈಂದೂರಿನಲ್ಲಿ ಬೃಹತ್ ಮ್ಯಾರಥಾನ್

Pinterest LinkedIn Tumblr

ಕುಂದಾಪುರ: ಹಿಂದೂ ಜಾಗರಣ ವೇದಿಕೆ ಬೈಂದೂರು ತಾಲೂಕು ವತಿಯಿಂದ ಹಿಂದೂ ಯುವವಾಹಿನಿ ನೇತೃತ್ವದಲ್ಲಿ ಬಾಂಗ್ಲಾ ವಿಮೋಚನೆ ಯುದ್ದದ ಗೆಲುವಿನ ಸ್ವರ್ಣ ಜಯಂತಿ ಪ್ರಯುಕ್ತ ಮ್ಯಾರಥಾನ್ ನಡೆಯಿತು.

ಬೈಂದೂರು ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ನಿವೃತ್ತ ಯೋಧರಾದ ಚಂದ್ರಶೇಖರ ನಾವುಡ
ದಿವ್ಯಿಟಿಕೆ ಬೆಳಗಿಸಿ, ಬೈಂದೂರು ತಾಲೂಕು ಹಿಂದು ಯುವವಾಹಿನಿ ಪ್ರಮುಖರಾದ ಪ್ರಶಾಂತ್ ಮೊಹ್ಲಿಯವರು ರಾಷ್ಟ್ರಧ್ವಜ ನೀಡುವುದರ ಮೂಲಕ ಮ್ಯಾರಥಾನ್ ಚಾಲನೆ ನೀಡಿದರು. ಮ್ಯಾರಥಾನ್ ಆಂಜನೇಯ ದೇವಸ್ಥಾನದಿಂದ ಹೊರಟು ಸೋಮೇಶ್ವರ ದೇವಸ್ಥಾನದ ಬಳಿ ಸಮಾಪ್ತಿಗೊಂಡ ಬಳಿಕ ಸಮಾರೋಪ ನಡೆಯಿತು.

ಈ ಸಂದರ್ಭ ರಾಷ್ಟ್ರೀಯ ಸ್ವಯಂ ಸೇವಕ‌ಸಂಘದ ಹಿರಿಯರಾದ ವಿಜಯ್ ಕೊಡವೂರು ತಮ್ಮ ದಿಕ್ಸೂಚಿ ಮಾತಿನಲ್ಲಿ, ದೇಶವಾಸಿಗಳ ತ್ಯಾಗ ಮತ್ತು ಸಮರ್ಪಣಾ ಭಾವದಿಂದ ಮಾತ್ರ ದೇಶದ ಅಸ್ತಿತ್ವವನ್ನ ಉಳಿಸಿಕೊಳ್ಳಲು ಸಾಧ್ಯ ಎಂದು ದೇಶಕ್ಕಾಗಿ ಮಡಿದ ವೀರರ ಜೀವನದ ಬಗ್ಗೆ ಮತ್ತು 1971 ಯುದ್ಧದ ಯಶೋಗಾಥೆಯನ್ನು ಸವಿವರವಾಗಿ ತಿಳಿಸಿದರು.

ಮುಖ್ಯ ಅಥಿತಿ ಸೈನಿಕ ಹಾಗು ನೇಶನ್ ಲವರ್ಸ್ ಸಂಸ್ಥಾಪಕ ಪ್ರಶಾಂತ್ ದೇವಾಡಿಗ, ಹಿಂದೂ ಜಾಗರಣ ವೇದಿಕೆಯ ರಾಜೇಶ್ ಆಚಾರ್, ಶಂಕರ್ ಕೋಟ, ವಾಸುದೇವ್ ಗಂಗೊಳ್ಳಿ, ನವೀನ್ ಗಂಗೊಳ್ಳಿ, ವೇದನಾಥ್ ಹೆರಂಜಾಲು ಉಪಸ್ಥಿತರಿದ್ದರು.

ಅಕ್ಷಯ್ ತಗ್ಗರ್ಸೆ ಕಾರ್ಯಕ್ರಮ ನಿರೂಪಿಸಿ, ಉಮೇಶ್ ಬಿಜೂರು ವಂದಿಸಿದರು. ಈ ಸಂದರ್ಭದಲ್ಲಿ ದೀಪಕ್ ಕುಮಾರ್ ಶೆಟ್ಟಿ, ಶರತ್ ಶೆಟ್ಟಿ ಉಪ್ಪುಂದ, ಗೋಪಾಲಕೃಷ್ಣ ಕಲ್ಮಕ್ಕಿ ಮೊದಲಾದವರು ಉಪಸ್ಥಿತರಿದ್ದರು.

 

Comments are closed.