ಕರಾವಳಿ

ಕಾಂಗ್ರೆಸ್ ಹಿರಿಯ ಮುಖಂಡ ಪಾರಂಪಳ್ಳಿ ಶಂಭು ಪೂಜಾರಿ ನಿಧನ

Pinterest LinkedIn Tumblr

ಉಡುಪಿ: ಕೋಟ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಬಿಲ್ಲವ ಸಮುದಾಯದ ಮುಖಂಡ ಪಾರಂಪಳ್ಳಿ ಶಂಭು ಪೂಜಾರಿ (61) ಗುರುವಾರ ಅನಾರೋಗ್ಯದಿಂದ ನಿಧರಾದರು.

ಸಾಲಿಗ್ರಾಮ ಪಟ್ಟಣ ಪಂಚಾಯತ್ 2ಬಾರಿ ಸದಸ್ಯರಾಗಿ ವಿಪಕ್ಷ ನಾಯಕನಾಗಿ, ಪ್ರಾರಂಭದ ಸಾಲಿಗ್ರಾಮ ಪುರಸಭೆಯ ಸದಸ್ಯರಾಗಿ, ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ಮಾಜಿ ನಿರ್ದೇಶಕರಾಗಿ, ಕೋಟ ನಾರಾಯಣಗುರು ಸೇವಾ ಸಂಘದ ಮಾಜಿ ಅಧ್ಯಕ್ಷರಾಗಿ, ಸಾಲಿಗ್ರಾಮ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಹೃದಯಾಘಾತದಿಂದ ಚಿಕಿತ್ಸೆ ಗಾಗಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಪತ್ನಿ ಗೀತಾ, ಉಡುಪಿ ಜಿ.ಪಂ ಮಾಜಿ ಸದಸ್ಯೆಯಾಗಿದ್ದು, ಓರ್ವ ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Comments are closed.