ಉಡುಪಿ: ಕಳೆದ ಎರಡು ತಿಂಗಳುಗಳಿಂದ ಅಪ್ರಾಪ್ತ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಮಹಿಳಾ ಠಾಣೆಯ ಪೊಲೀಸರು ಪೊಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ.
ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಸಂದೀಪ್ ನಾಯ್ಕ ಹಾಗೂ ವಿಘ್ನೇಶ್ ನಾಯ್ಕ ಬಂಧಿತ ಆರೋಪಿಗಳು.

ಬಾಲಕಿಯ ತಂದೆ ಹಾಗೂ ತಾಯಿ ಕೆಲಸಕ್ಕೆಂದು ಹೊರ ಹೋದ ಸಂದರ್ಭ ಮನೆಯಲ್ಲಿ ಬಾಲಕಿ ಒಬ್ಬಳೇ ಇರುತ್ತಿದ್ದಳು. ಈ ವೇಳೆ ಸಮೀಪದ ಮನೆಯಲ್ಲಿರುವ ಬಾಲಕಿಯ ಸಂಬಂಧಿಕರಾದ ಆರೋಪಿಗಳು, ಮನೆಗೆ ಬಂದು ನಿನ್ನ ತಂದೆ ತಾಯಿಯನ್ನು ಕೊಲ್ಲುವುದಾಗಿ ಬೆದರಿಸಿ ಆಕೆ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ.
ಬಾಲಕಿಯ ತಾಯಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ವಿವಾಹಿತ ಸಂದೀಪ್ ನಾಯ್ಕ ಪೈಂಟಿಂಗ್ ಕೆಲಸ ಮಾಡುತ್ತಿದ್ದು ವಿಘ್ನೇಶ್ ಕೂಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
Comments are closed.