ಕರಾವಳಿ

ನೀಲಾವರ ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಿದ ವಿ.ಹಿಂ.ಪ, ಭಜರಂಗದಳ

Pinterest LinkedIn Tumblr

ಉಡುಪಿ: ವಿಶ್ವಹಿಂದೂ ಪರಿಷತ್, ಭಜರಂಗ ದಳ ಬ್ರಹ್ಮಾವರ ಪ್ರಖಂಡದ ವತಿಯಿಂದ ನೀಲಾವರ ಗೋಶಾಲೆಯಲ್ಲಿ ಗೋಪೂಜೆ ನಡೆಸಲಾಯಿತು.

ಬ್ರಹ್ಮಾವರ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ನೀಲಾವರ‌ ಗೋಶಾಲೆ ತನಕ ವಾಹನದಲ್ಲಿ 4000 ಕೆ.ಜಿ ಗೋಗ್ರಾಸವನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

ಉಡುಪಿ ಶಾಸಕ ಕೆ. ರಘುಪತಿ ಭಟ್ ಮತ್ತು ವಿಶ್ವಹಿಂದೂ ಪರಿಷತ್ ಭಜರಂಗ ದಳ ಬ್ರಹ್ಮಾವರ ಪ್ರಖಂಡದ ಅಧ್ಯಕ್ಷ ರಾಘವೇಂದ್ರ ಕುಂದರ್ ಜೆ. ಬಿ. ಗೋವಿಗೆ ಆರತಿ ಬೆಳಗಿ ಗೋಗ್ರಾಸ ನೀಡಿ ಗೋಪೂಜೆ ನೆರವೇರಿಸಿದರು.

ಈ ಸಂದರ್ಭ ಹಿಂದೂ ಸಂಘಟನೆಯ ಪ್ರಮುಖರಾದ ದಿನೇಶ್ ಮೆಂಡನ್, ಸುರೇಂದ್ರ ಮಾರ್ಕೋಡು, ಶಶಿಕಾಂತ್ ಕುಂಜಾಲು, ಸತೀಶ್ ಶೆಟ್ಟಿ ಹೆರಂಜೆ, ಪ್ರವೀಣ್ ನಾಯಕ್ ಹಂದಾಡಿ, ವರದೇಂದ್ರ ನೀಲಾವರ, ಮಹೇಂದ್ರ ನೀಲಾವರ, ಧನಂಜಯ್ ಅಮೀನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Comments are closed.