ಕರಾವಳಿ

ಮಂಗಳೂರು ನಗರ ಪೊಲೀಸ್ ಇಲಾಖೆಗೆ ಸ್ಫೋಟಕ ಪತ್ತೆಗಾಗಿ ನಿಯೋಜನೆಗೊಂಡ ‘ರಾಣಿ’.!

Pinterest LinkedIn Tumblr

ಮಂಗಳೂರು: ನಗರದ ಪೊಲೀಸ್ ಇಲಾಖೆಗೆ ‘ರಾಣಿ’ ಹೆಸರಿನ ಶ್ವಾನ ಸೇರ್ಪಡೆಯಾಗಿದ್ದು, ಪೊಲೀಸರಿಗೆ ಬಾಂಬ್‌ ಸೇರಿದಂತೆ ಮತ್ತಿತರ ಸ್ಫೋಟಕ ವಸ್ತುಗಳ ಪತ್ತೆಗೆ ವಿಶೇಷ ತರಬೇತಿ ಪಡೆದಿದ್ದಾಳೆ.

ಪೊಲೀಸ್‌ ಇಲಾಖೆಯಲ್ಲಿ ಶ್ವಾನದಳಕ್ಕೆ ವಿಶೇಷ ಪ್ರಾಮುಖ್ಯತೆ ಇದ್ದು ಮಂಗಳೂರು ನಗರ ಪೊಲೀಸ್ ಇಲಾಖೆಯ ಶ್ವಾನದಳಕ್ಕೆ ರಾಣಿ ಎಂಬ ಶ್ವಾನದ ಹೊಸ ಸೇರ್ಪಡೆಯಾಗಿದೆ.

ಬೆಂಗಳೂರು ಶ್ವಾನದಳ ತರಬೇತಿ ಕೇಂದ್ರದಲ್ಲಿ ಸ್ಫೋಟಕ ಪತ್ತೆ ತರಬೇತಿಯನ್ನು ಮುಗಿಸಿದ ರಾಣಿ ಶ್ವಾನವೂ ಮಂಗಳೂರು ನಗರಕ್ಕೆ ಕರ್ತವ್ಯ ನಿಯೋಜನೆಗೊಂಡಿದ್ದು. ಮನೋಜ್ ಶೆಟ್ಟಿ ಮತ್ತು ನಾಗೇಂದ್ರ ಇವರು ರಾಣಿಯ ಹ್ಯಾಂಡ್ಲರ್ ಆಗಿರಲಿದ್ದಾರೆ. ಈಕೆ ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಸ್ಫೋಟಕ ಪತ್ತೆ ಬಗ್ಗೆ ಕರ್ತವ್ಯದಲ್ಲಿ ಪೊಲೀಸರಿಗೆ ಸಹಕರಿಸಲಿದ್ದಾಳೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ”ರಾಣಿ ಎಂಬ ಶ್ವಾನವು ಬೆಂಗಳೂರು ಶ್ವಾನದಳ ತರಬೇತಿ ಕೇಂದ್ರದಲ್ಲಿ ಸ್ಫೋಟಕ ಪತ್ತೆ ತರಬೇತಿಯನ್ನು ಪಡೆದು ಮಂಗಳೂರು ನಗರಕ್ಕೆ ಕರ್ತವ್ಯ ನಿಯೋಜನೆಗೊಂಡಿರುತ್ತದೆ. ಮನೋಜ್ ಶೆಟ್ಟಿ ARSI ಮತ್ತು ನಾಗೇಂದ್ರರವರು ಇದರ ಹ್ಯಾಂಡ್ಲರ್ ಆಗಿರುತ್ತಾರೆ. ಮುಂದೆ ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಸ್ಫೋಟಕ ಪತ್ತೆ ಬಗ್ಗೆ ಕರ್ತವ್ಯಕ್ಕೆ ನಿಯೋಜಿಸಲಾಗುವುದು” ಎಂದಿದ್ದಾರೆ.

Comments are closed.