ಕರಾವಳಿ

ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಳದ ಸರ್ವಾಂಗೀಣ ಅಭಿವೃದ್ಧಿಗೆ ಕಾಯಕಲ್ಪ: ಎಂ. ಪ್ರಭಾಕರ ಶೆಟ್ಟಿ

Pinterest LinkedIn Tumblr

ಕುಂದಾಪುರ: ಪುರಾಣ ಪ್ರಸಿದ್ಧವಾದ ದೇವಸ್ಥಾನದ ಅಭಿವೃದ್ಧಿ ಕಾರ್ಯದ ಜೊತೆಗೆ ಸ್ವಚ್ಚತೆಗೆ ಮೊದಲ ಆಧ್ಯತೆ ನೀಡಲಾಗುವುದು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೇವೆಗಳನ್ನು ಸಮರ್ಪಿಸಲು ಸಹಕಾರ ಮತ್ತು ಸಮರ್ಪಕ ವ್ಯವಸ್ಥೆಗಳನ್ನು ನೀಡಲು ಪ್ರಾಮಾಣಿಕವಾಗಿ ನೂತನ ವ್ಯವಸ್ಥಾಪನ ಸಮಿತಿ ದುಡಿಯಲಿದೆ ಎಂದು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಳದ ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ.ಪ್ರಭಾಕರ ಶೆಟ್ಟಿ ಹೇಳಿದರು.

ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.

ದೇವಳದ ಪ್ರಧಾನ ತಂತ್ರಿಗಳ ಮಾರ್ಗದರ್ಶನದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರು, ಭಕ್ತರ ಸಲಹೆ ಪಡೆದು ಅಭಿವೃದ್ಧಿ ಕಾರ್ಯ ಮಾಡಲಾಗುತ್ತದೆ. ಧ್ವಜ ಮರ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮೊದಲಾದ ಐತಿಹಾಸಿಕ ಕಾರ್ಯಕ್ರಮ ದೇವಳದಲ್ಲಿ ನಡೆಯಲಿದ್ದು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಈ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತದೆ. ಕೋಟಿತೀರ್ಥ ಪುಷ್ಕರಣಿಯ ಶುಚಿತ್ವಕ್ಕೆ ಮಹತ್ವದ ಆದ್ಯತೆ ನೀಡಲಾಗುತ್ತದೆ. ಪೌಳಿಯಲ್ಲಿ ಬೆಳ್ಳಿ ರಥ ನಿರ್ಮಾಣ ಮಾಡಬೇಕೆಂದು ದಾನಿಯೊಬ್ಬರು 1 ಲಕ್ಷ ಹಣ ಮುಂಗಡವಾಗಿ ನೀಡಿದ್ದು ಆ ಕಾರ್ಯವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಮಿತಿ ಕಾರ್ಯೋನ್ಮುಖವಾಗಿದೆ. ಇನ್ನು ಭಕ್ತರ ಬಹು ಕಾಲಗಳ ಬೇಡಿಕೆಯಾದ ದೇವಸ್ಥಾನ ಸಂಪರ್ಕದ ಪ್ರಮುಖ ಎರಡು ಕಡೆಗಳಲ್ಲಿ ಮುಖ್ಯದ್ವಾರ ನಿರ್ಮಾಣಕ್ಕೆ ಈಗಾಗಾಲೇ ಅಂದಾಜು ವೆಚ್ಚದ ಪಟ್ಟಿ ಸಿದ್ದಪಡಿಸಲಾಗಿದ್ದು ಮುಂದಿನ ದಿನಗಳಲ್ಲಿ ಅದಕ್ಕೂ ಕಾಯಕಲ್ಪ ನೀಡುವ ಇರಾದೆ ಇದೆ ಎಂದರು.

ನೂತನ ವ್ಯವಸ್ಥಾಪನ ಸಮಿತಿ ಸದಸ್ಯರ ವಿವರ:
ತಂತ್ರಿ ಪ್ರಸನ್ನಕುಮಾರ್ ಐತಾಳ್, ಉದ್ಯಮಿ ಸುರೇಶ್ ಶೇರಿಗಾರ್, ಎನ್.ರಾಘವೇಂದ್ರ ರಾವ್ ನೇರಂಬಳ್ಳಿ, ನಿವೃತ್ತ ಮುಖ್ಯೋಪಾಧ್ಯಾಯಿನಿ ಭಾರತಿ, ಚಂದ್ರಿಕಾ ಧನ್ಯ, ಶಾರದಾ ಮೊಗವೀರ, ಮಂಜುನಾಥ್ ಆಚಾರ್ಯ ಅರಸರಬೆಟ್ಟು ಬೀಜಾಡಿ.

ದೇವಳದ ಆಡಳಿತಾಧಿಕಾರಿ ಕುಂದಾಪುರ ತಹಶೀಲ್ದಾರ್ ಆನಂದಪ್ಪ ನಾಯಕ್ ಇವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.

ಅಧಿಕಾರ ಸ್ವೀಕಾರ ವೇಳೆ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲ ಕೃಷ್ಣ ಶೆಟ್ಟಿ ಮಾರ್ಕೋಡು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ್, ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಗೊಲ್ಲ, ಕಿಶೋರ್ ಕುಂದಾಪುರ, ಸುಬ್ರಹ್ಮಣ್ಯ ಹೊಳ್ಳ, ಪ್ರೇಮನಂದಾ ಶೆಟ್ಟಿ ಕಟ್ಕೆರೆ, ರಾಜೇಶ್ ಕಾವೇರಿ, ಮಾಜಿ ಪುರಸಭಾ ಸದಸ್ಯರಾದ ನಾಗರಾಜ ಕಾಮದೇನು, ಶಂಕರ್ ಅಂಕದಕಟ್ಟೆ, ಸುರೇಶ್ ಶೆಟ್ಟಿ ಗೋಪಾಡಿ, ಸುರೇಂದ್ರ ಮಾರ್ಕೋಡು, ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Comments are closed.