ಕುಂದಾಪುರ: ನಮ್ಮನ್ನು ರಕ್ಷಿಸುವ ಆರಕ್ಷಕರು ಸುವ್ಯವಸ್ಥೆಯಲ್ಲಿರಬೇಕೆಂಬ ಸದುದ್ದೇಶದಿಂದ ಅವರಿಗೆ ಮಳೆಗಾಲದಲ್ಲಿ ಆಸರೆಯಾಗಿ ಕೊಡೆಯನ್ನು ವಿತರಿಸಲಾಗಿದ್ದು ಇದೊಂದು ಮಾದರಿ ಕೆಲಸವಾಗಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ನುಡಿದರು.

ಉಡುಪಿ ಜಿಲ್ಲಾ ತೋಟಗಾರಿಕ ಬೆಳೆಗಾರರ ಸಂಘ (ರಿ.) ಉಡುಪಿ ಹಾಗೂ ಪ್ರಧಾನಮಂತ್ರಿ ಜನ ಔಷಧಿ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಗುರುವಾರದಂದು ಕುಂದಾಪುರ ಸರ್ಕಲ್ ವ್ಯಾಪ್ತಿ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸರಿಗೆ ಕೊಡೆ ವಿತರಣೆ ಕಾರ್ಯಕ್ರಮ ನಡೆದಿದ್ದು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕೊಡೆ ಹಸ್ತಾಂತರಿಸಿ ಅವರು ಮಾತನಾಡಿದರು.
ಸಿದ್ದಾಪುರ, ಗಂಗೊಳ್ಳಿ, ಬಸ್ರೂರು, ಕೋಟೇಶ್ವರ ಸಹಿತ ಹಲವೆಡೆ ಹಳ್ಳಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಅತ್ಯಂತ ಕಮ್ಮಿ ದರದಲ್ಲಿ ಔಷಧಿಗಳು ಸಿಗುತ್ತಿದ್ದು ಅಶೋಕ್ ಕುಮಾರ್ ಕೊಡ್ಗಿಯವರು ಇಂತಹ ಜನೌಷಧಿ ಕೇಂದ್ರ ಸ್ಥಾಪಿಸಿ ಹಳ್ಳಿಗಳಲ್ಲಿ ಚಾಪು ಮೂಡಿಸಿದ್ದಾರೆ ಇದು ಉತ್ತಮ ವಿಚಾರವಾಗಿದೆ ಎಂದರು.
ಅಮಾಸೆಬೈಲಿನಲ್ಲಿ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎ.ಜಿ. ಕೊಡ್ಗಿಯವರಿಂದ ಕೊಡೆ ಹಸ್ತಾಂತರ ನಡೆದಿದ್ದು, ಕಂಡ್ಲೂರಿನಲ್ಲಿ ಗ್ರಾ.ಪಂ ಅಧ್ಯಕ್ಷ ವಿಜಯ ಪುತ್ರನ್, ಕುಂದಾಪುರದಲ್ಲಿ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಕೊಡೆಗಳನ್ನು ಹಸ್ತಾಂತರಿಸಿದರು. ಆಯಾಯ ಸಂದರ್ಭ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ತೋಟಗಾರಿಕ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ, ಉಪಾಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ, ನಿರ್ದೇಶಕರಾದ ಅಮರನಾಥ ಚಾತ್ರ, ಗಣೇಶ್ ಕಾಮತ್, ಎ.ವಿ ಉಡುಪ, ಪ್ರದೀಪ ಹೆಬ್ಬಾರ್, ಸಿಇಓ ವೀರೇಂದ್ರ ಐತಾಳ್ ಮೊದಲಾದವರು ಕೊಡೆ ಹಸ್ತಾಂತರ ವೇಳೆ ಉಪಸ್ಥಿತರಿದ್ದರು.
Comments are closed.