ಕರಾವಳಿ

ಮೋದಿ 2ನೇ ಅವಧಿ ಸರಕಾರಕ್ಕೆ 2 ವರ್ಷ: ಕೋವಿಡ್ ವಾರಿಯರ್ಸ್’ಗಳಿಗೆ 9 ಲಕ್ಷ ವೆಚ್ಚದ ಕಿಟ್ ವಿತರಿಸಿದ ಬಿಜೆಪಿ ಯುವಮೋರ್ಚಾ

Pinterest LinkedIn Tumblr

ಉಡುಪಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 2 ನೇ ಅವಧಿಯ 2 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಯುವಮೋರ್ಚಾ ಉಡುಪಿ ಜಿಲ್ಲಾ ವತಿಯಿಂದ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ವಿಕ್ಯಾತ್ ಶೆಟ್ಟಿ ಹಾಗೂ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ಉಪ್ಪುಂದ ರವರ ವೈಯಕ್ತಿಕ ಮೊತ್ತದಲ್ಲಿ ಕೋವಿಡ್ ವಾರಿಯರ್ಸ್‌ ಗಳಿಗೆ , ಪೋಲೀಸ್ ಠಾಣಾ ಸಿಬ್ಬಂದಿಗಳಿಗೆ,ಮೆಸ್ಕಾಂ ಸಿಬ್ಬಂದಿಗಳಿಗೆ,ಆರೋಗ್ಯ ಇಲಾಖೆಗಳಿಗೆ ಸುಮಾರು 9 ಲಕ್ಷ ಮೌಲ್ಯದ ಪಿಪಿಇ ಕಿಟ್,ಕೊವಿಡ್ ಡೆಡ್ ಬಾಡಿ ಕಿಟ್,ಫಲ್ಸ್ ಆಕ್ಸೀಮೀಟರ್, ಸ್ಯಾನಿಟೈಸರ್, ಮಾಸ್ಕ್ ,ಪೇಸ್ ಶೀಲ್ಡ್ ಗಳನ್ನು ಜಿಲ್ಲೆಯ 5 ಮಂಡಲಗಳಿಗೆ ವಿತರಿಸಲಾಯಿತು.

ಕುಂದಾಪುರ ತಾಲೂಕು‌ ಆರೋಗ್ಯಾಧಿಕಾರಿ ಕಛೇರಿಗೆ ಕೋವಿಡ್ 25 ಡೆಡ್ ಬಾಡಿ ಕಿಟ್, ಕುಂದಾಪುರ ಪೋಲೀಸ್ ಠಾಣೆಗೆ 500 ಮಾಸ್ಕ್, 5 ಪೇಸ್ ಶೀಲ್ಡ್,2 ಬಾಟಲ್ ಸ್ಯಾನಿಟೈಸರ್, ಹಾಗೂ ಕುಂದಾಪುರ ಮೆಸ್ಕಾಂ ಕಛೇರಿಗೆ 500 ಮಾಸ್ಕ್ ,2 ಬಾಟಲ್ ಸ್ಯಾನಿಟೈಸರ್, ಆಕ್ಸೀಮೀಟರ್ ಗಳನ್ನು ವಿತರಿಸಲಾಯಿತು.

ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ವಿಕ್ಯಾತ್ ಶೆಟ್ಟಿ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ರಾಜ್ ಶಾಂತಿನಿಕೇತನ್ ಹಾಗೂ ಶರತ್ ಶೆಟ್ಟಿ ಉಪ್ಪುಂದ, ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಜ್ವಲ್ ಶೆಟ್ಟಿ,ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಆಕ್ಷಿತ್ ಹೆರ್ಗ ,ಕುಂದಾಪುರ ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಅಭಿರಾಜ್ ಸುವರ್ಣ, ಬೈಂದೂರು ಯುವಮೋರ್ಚಾ ಉಪಾಧ್ಯಕ್ಷ ಲೋಹಿತ್ ಮತ್ತಿತರರು
ಉಪಸ್ತಿತರಿದ್ದರು.

Comments are closed.