ಕುಂದಾಪುರ: ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳನ್ನು ಪುರಸಭೆಯ ಅಧಿಕಾರಿಗಳು ಮುಚ್ಚಿಸಿದ ಘಟನೆ ಶುಕ್ರವಾರ ಕುಂದಾಪುರ ನಗರ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳಿಗ್ಗೆನಿಂದ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ತೆರಯಲಾಗಿದ್ದ ಎಲ್ಲಾ ಅಂಗಡಿಗಳನ್ನು ಮುಚ್ಚಿಸುವ ಕೆಲಸ ಮಾಡಿದೆ. ಏಕಾಏಕಿ ತೀರ್ಮಾನದಿಂದ ಅಂಗಡಿ ಮಾಲೀಕರು ಮತ್ತು ಕೆಲಸದಾಳುಗಳು ಕೆಲ ಕಾಲ ಗೊಂದಲಕ್ಕೀಡಾದರು. ಮಧ್ಯಾಹ್ನದ ಹೊತ್ತಿಗೆ ಭಾಗಶಃ ಅಂಗಡಿಗಳು ಬಂದ್ ಆಗಿದ್ದವು.
ಮದುವೆಗೆ ಅನುಮತಿ…
ಕುಂದಾಪುರ ಮಿನಿ ವಿಧಾನಸೌಧದಲ್ಲಿರುವ ತಹಶಿಲ್ದಾರ್ ಕಚೇರಿಯಲ್ಲಿ ಮದುವೆಗೆ ಅನುನತಿ ನೀಡಲಾಗುತ್ತಿದ್ದು ನೂರಾರು ಸಂಖ್ಯೆಯಲ್ಲಿ ಮದುವೆಗೆ ಅನುಮತಿ ಪಡೆಯಲು ಜನರು ಆಗಮಿಸುತ್ತಿದ್ದ ದೃಶ್ಯ ಕಂಡುಬಂತು.
ಕೊರೋನಾ ಜಾಗೃತಿ ಮೂಡಿಸಿದ ತೆಕ್ಕಟ್ಟೆ ಫ್ರೆಂಡ್ಸ್…
ತೆಕ್ಕಟ್ಟೆ ಫ್ರೆಂಡ್ಸ್ ತೆಕ್ಕಟ್ಟೆಯವರ ಆಂಬುಲೆನ್ಸ್ ಮೂಲಕ ಕೊರೋನಾ ಜಾಗೃತಿ ಮೂಡಿಸುವ ಕಾರ್ಯ ಕುಂದಾಪುರದ ನಗರದಲ್ಲಿ ತೆಕ್ಕಟ್ಟೆ ಪ್ರಕಾಶ್ ಶೆಟ್ಟಿ ನೇತೃತ್ವದಲ್ಲಿ ನಡೆಯಿತು.
Comments are closed.