ಕರಾವಳಿ

ಉಡುಪಿಯ ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಏ.11 ರಿಂದ ಆರಂಭ: ಡಿಸಿ ಜಿ.ಜಗದೀಶ್

Pinterest LinkedIn Tumblr

ಉಡುಪಿ: ಉಡುಪಿ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 169ಎ ನಲ್ಲಿನ ಪರ್ಕಳ ಪೇಟೆ ವ್ಯಾಪ್ತಿಯ ರಸ್ತೆ ಅಗಲೀಕರಣ ಕಾರ್ಯವು ಏಪ್ರಿಲ್ 11 ರಿಂದ ಆರಂಭಗೊಳ್ಳಲಿದ್ದು, ಕಾಮಗಾರಿಗಾಗಿ ಭೂ ಸ್ವಾಧೀನಪಡಿಸಿಕೊಳ್ಳುವ 72 ಮಂದಿ ಭೂ ಮಾಲೀಕರಿಗೆ ರೂ.21.84 ಕೋಟಿ ರೂ ಭೂ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಅವರು ಬುಧವಾರ ಪರ್ಕಳದ ವಿಘ್ನೇಶ್ವರ ಸಭಾಭವನದಲ್ಲಿ ನಡೆದ, ಪರ್ಕಳ ಪ್ರದೇಶದ ಭೂ ಸಂತ್ರಸ್ಥರ ಸಭೆಯಲ್ಲಿ ಮಾತನಾಡಿದರು.

ಪರ್ಕಳ ಪಟ್ಟಣ ವ್ಯಾಪ್ತಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತಿದ್ದು ಇಲ್ಲಿ ರಸ್ತೆ ಅಗಲೀಕರಣ ಅತ್ಯಂತ ಅವಶ್ಯಕವಾಗಿದ್ದು, ರಾಷ್ಟ್ರೀಯ ಹೆದ್ದಾರಿಯಿಂದ ಈಗಾಗಲೇ ರಸ್ತೆ ಅಗಲೀಕರಣಕ್ಕೆ 3ಜಿ ಪ್ರಕಟವಾಗಿದ್ದು, ಏಪ್ರಿಲ್ 11 ರಿಂದ ಕಾಮಗಾರಿ ಆರಂಭಿಸಲಾಗುವುದು ಆದ್ದರಿಂದ ರಸ್ತೆ ಅಗಲೀಕರಣದಿಂದ ತಮ್ಮ ಕಟ್ಟಡ ಸಾಮಗ್ರಿಗಳು , ಮರಮುಟ್ಟು ಗಳಿಗೆ ಹಾನಿಯಾಗುವವರು ಕೂಡಲೇ ಅವುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು , ಅವಶ್ಯವಿದ್ದಲ್ಲಿ ಈ ಕಾರ್ಯಕ್ಕೆ ಅಗತ್ಯ ನೆರವು ಒದಗಿಸಲಾಗುವುದು ಎಂದು ಡಿಸಿ ಹೇಳಿದರು.

ಭೂ ಪರಿಹಾರಕ್ಕಾಗಿ ನೋಟೀಸ್ ನೀಡಿದ 30 ದಿನದಲ್ಲಿ ಅಗತ್ಯ ದಾಖಲಾತಿಗಳನ್ನು ನೀಡಿ ಪರಿಹಾರ ಪಡೆಯಬಹುದು, ಪರಿಹಾರ ಪಡೆದ ನಂತರ ಪರಿಹಾರದ ಮೊತ್ತ ಕಡಿಮೆ ಎನಿಸಿದ್ದಲ್ಲಿ 45 ದಿನಗಳ ಒಳಗೆ ಆರ್ಬಿಟರ್ ಮೂಲಕ ಮನವಿ ಸಲ್ಲಿಸಬಹುದಾಗಿದ್ದು , ಈ ಮನವಿಯು ನ್ಯಾಯುಯುತವಾಗಿದ್ದರೆ, ಹೆಚ್ಚಿನ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕರಿ ಜಿ.ಜಗದೀಶ್ ತಿಳಿಸಿದರು.

ಶಾಸಕ ರಘುಪತಿಭಟ್ ಮಾತನಾಡಿ, ಭೂಮಿ ಕೆಳದುಕೊಳ್ಳುವ ನಾಗರೀಕರಿಗೆ ಗರಿಷ್ಠ ಮೊತ್ತದ ಪರಿಹರ ನೀಡುತ್ತಿದ್ದು, ಜಿಲ್ಲೆಯ ಅಭಿವೃಧ್ದಿಯ ದೃಷ್ಠಿಯಿಯೀ ರಸ್ತೆ ಕಾಮಗಾರಿ ಅತ್ಯಂತ ಅವಶ್ಯಕವಾಗಿದ್ದು, ನಾಗರೀಕರು ಸಹಕರಿಸಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಾಗರಾಜ ನಾಯಕ್ ಭೂ ಮಾಲಕರಿಗೆ ನೀಡಲಾಗುವ ಪರಿಹಾರದ ಕುರಿತು ಮಾಹಿತಿ ನೀಡಿದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಪೌರಾಯುಕ್ತ ಉದಯ ಶೆಟ್ಟಿ, ಸಹಾಯಕ ಇಂಜಿನಿಯರ್ ಮಂಜುನಾಥ ನಾಯಕ್ ಹಾಗೂ ಭೂ ಮಾಲಕರು ಉಪಸ್ಥಿತರಿದ್ದರು.

Comments are closed.