ಕರಾವಳಿ

ಮದುವೆಗೆ ಹೋಗಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು; 3.28 ಲಕ್ಷ ಮೌಲ್ಯದ ಚಿನ್ನಾಭರಣಕ್ಕೆ ಕನ್ನ

Pinterest LinkedIn Tumblr

ಉಡುಪಿ: ಮನೆಗೆ ಬೀಗ ಹಾಕಿಕೊಂಡು ಮದುವೆಗೆ ಹೋಗಿದ್ದ ವೇಳೆ ಬೀಗ ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ 3.28 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದ ಘಟನೆ ಕಾರ್ಕಳದ ಅಜೆಕಾರು ಮರ್ಣೆ ಎಂಬಲ್ಲಿ ನಡೆದಿದೆ.

(ಸಾಂದರ್ಭಿಕ ಚಿತ್ರ)

ಅಜೆಕಾರು ಮರ್ಣೆ ನಿವಾಸಿ ನಸೀಮಾ ಅವರು ಮಾರ್ಚ್ 8 ರಂದು ತನ್ನ ಗಂಡನ ಅಣ್ಣನ ಮಗಳ ಮದುವೆಗೆ ಹೋದ ಸಂದರ್ಭದಲ್ಲಿ ಕಳ್ಳರು ಮನೆಯ ಬಾಗಿಲಿನ ಬೀಗವನ್ನು ಮುರಿದು ಮನೆಯಲ್ಲಿದ್ದ ಚಿನ್ನದ ನೆಕ್ಲೇಸ್, ಚಿನ್ನದ ಬ್ರಾಸ್ಲೆಟ್, ಚಿನ್ನದ ಬೆಂಡೋಲೆ ಜುಮ್ಕಿ ಗಳನ್ನು ಕದ್ದೊಯ್ದಿದ್ದು, ಕದ್ದ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ 3.28 ಲಕ್ಷ ಆಗಿದೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Comments are closed.