ಕರಾವಳಿ

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ದೋಷಿಯೆಂದು ಪೋಕ್ಸೋ ಕೋರ್ಟ್ ತೀರ್ಪು

Pinterest LinkedIn Tumblr

ಉಡುಪಿ: 2014ರಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪೋಕ್ಸೋ ಪ್ರಕರಣದಲ್ಲಿ ಆರೋಪಿ ದೋಷಿಯೆಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ್ ವನಮಾಲಾ ಆನಂದರಾವ್ ತೀರ್ಪು ಪ್ರಕಟಿಸಿದ್ದಾರೆ.

ಅಪರಾಧಿ ಶೇಖ್ ಮಹಮ್ಮದ್ ಶಕೀಲ್ ಎನ್ನುವಾತ 17 ವರ್ಷ ಪ್ರಾಯದ ಯುವತಿಯನ್ನು ತನ್ನ ಕಾರಿನಲ್ಲಿ ಅಪಹರಿಸಿ ಆಕೆಯನ್ನು ಮಣಿಪಾಲ ಸಮೀಪದ ಶಿವಳ್ಳಿಗೆ ಕರೆದೊಯ್ದು ಕಾರಿನಲ್ಲಿ ಲೈಂಗಿಕ ದೌರ್ಜನ್ಯವೆಸಗಿದ್ದು ನಂತರ ಕಾಪುವಿನ ತನ್ನ ಮನೆಯಲ್ಲಿ ಕೂಡಿಹಾಕಿದ್ದ.‌ ಮಗಳ ನಾಪತ್ತೆ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಗೆ ತಂದೆ ದೂರು ನೀಡಿದ್ದರು. ಅಂದಿನ ಪಿಎಸ್ಐ ಗಿರೀಶ್ ಆರೋಪಿಯನ್ನು ಬಂಧಿಸಿದ್ದು ಸಿಪಿಐ ಅರುಣ್ ಬಿ. ನಾಯಕ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 27 ಮಂದಿ ಸಾಕ್ಷಿಗಳ ಪೈಕಿ 13 ಸಾಕ್ಷಿ ವಿಚಾರಣೆ ನಡೆದಿದ್ದು ಆತ ದೋಷಿಯೆಂದು ನ್ಯಾಯಾಲಯ ತೀರ್ಪು ನೀಡಿದೆ. ಅಪರಾಧಿಗೆ 15 ಸಾವಿರ ದಂಡ ವಿಧಿಸಿದ್ದು 5 ಸಾವಿರ ಸರಕಾರಕ್ಕೆ, 10 ಸಾವಿರ ಸಂತ್ರಸ್ತೆಗೆ‌ ನೀಡಲು ಆದೇಶಿಸಿದೆ.

ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.

Comments are closed.