ಕರಾವಳಿ

ಯುವಕನ ಕೊಲೆ ಯತ್ನ ಆರೋಪ: ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಜಾಮೀನು ಅರ್ಜಿ ತಿರಸ್ಕೃತ

Pinterest LinkedIn Tumblr

ಉಡುಪಿ: ಯುವಕನೊಬ್ಬನ‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತನಾದ ಆರೋಪಿಗೆ ಕುಂದಾಪುರದಲ್ಲಿರುವ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯವು ಜಾಮೀನು ತಿರಸ್ಕರಿಸಿ ಆದೇಶ ನೀಡಿದೆ.

ಉಡುಪಿ‌ ಜಿಲ್ಲೆಯ ಪಾರಂಪಳ್ಳಿ ಪಡುಕೆರೆ ನಿವಾಸಿ ಗಗನ್ ಪೂಜಾರಿ (25) ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

ಫೆಬ್ರವರಿ 23 ರಂದು ರಾತ್ರಿ ಆರೋಪಿ‌ ಗಗನ್ ಅಕ್ಷಯ್ ಮೊಗವೀರನ ತಲೆಗೆ ರಾಡಿನಿಂದ ಮಾರಣಾಂತಿಕ‌ ಹಲ್ಲೆ‌ ನಡೆಸಿ ಪರಾರಿಯಾಗಿದ್ದ. ತರುವಾಯ ಕೋಟ ಪೊಲೀಸರ ತಂಡ ತಲ್ಲೂರಿನಲ್ಲಿ ಆರೋಪಿಯನ್ನು ಬಂಧಿಸಿತ್ತು. ಈತನ ಮೇಲೆ ಕೊಲೆ ಯತ್ನ ಪ್ರಕರಣ (ಐಪಿಸಿ ಕಲಂ 307) ದಾಖಲಾಗಿತ್ತು.

ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗೆ ಜಾಮೀನು ನೀಡಬೇಕೆಂದು ಆತನ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಗಾಯಾಳು ಯುವಕ ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು ಹೇಳಿಕೆ ನೀಡಲು ಇನ್ನೂ ಸಮರ್ಥನಾಗಿರದ ಬಗ್ಗೆ ವೈದ್ಯಕೀಯ ದಾಖಲೆಗಳಿರುವ ಕಾರಣ ಜಾಮೀನು‌ ಅರ್ಜಿ ತಿರಸ್ಕೃತಗೊಳಿಸಿ ನ್ಯಾಯಾಧೀಶರಾದ ನರಹರಿ ಪ್ರಭಾಕರ್ ಮರಾಠೆ ಆದೇಶಿಸಿದ್ದಾರೆ.

ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದಿಸಿದ್ದರು.

Comments are closed.