ಕರಾವಳಿ

ಅಸಹಾಯಕ ವೃದ್ಧ ಪತ್ತೆ – ಉಡುಪಿಯ ಹೊಸಬೆಳಕು ಆಶ್ರಮಕ್ಕೆ ದಾಖಲು

Pinterest LinkedIn Tumblr

ಉಡುಪಿ: ಹೂಡೆ – ಬೆಂಗ್ರೆಯ ಬೊಬ್ಬರ್ಯಗುಡಿ ಹತ್ತಿರ ಅಸಹಾಯಕ ಪರಿಸ್ಥಿತಿಯಲ್ಲಿದ್ದ ವೃದ್ಧರನ್ನು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿ ರಕ್ಷಿಸಿದ್ದಾರೆ.

ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಗಣೇಶ್ ನಾಯ್ಕ್ ವೃದ್ಧರೊಬ್ಬರನ್ನು ರಕ್ಷಿಸಿ ಮಣಿಪಾಲದ ಸರಳಬೆಟ್ಟಿನ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿರುತ್ತಾರೆ. ವೃದ್ದರು ತನ್ನ ಹೆಸರು ಮಣಿ, ಊರು ಕೇರಳ ಎನ್ನುತ್ತಿದ್ದು, ಮಲೆಯಾಳಿ ಭಾಷೆ ಮಾತನಾಡುತ್ತಾರೆ.

ವೃದ್ಧರ ವಾರಸುದಾರರು ಯಾರಾದರು ಇದ್ದಲ್ಲಿ ಉಡುಪಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ದೂ.ಸಂಖ್ಯೆ: 0820 -2526394 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Comments are closed.